ರಾಮಕುಂಜೇಶ್ವರ ದೇವಸ್ಥಾನದಲ್ಲಿ ಧನು ಪೂಜೆ- ಎಸ್.ಪಿ.ವೈ.ಎಸ್.ಎಸ್ ನಿಂದ ಯೋಗ ಶಿವ ನಮಸ್ಕಾರ ಕಾರ್ಯಕ್ರಮ

0


ಆಲಂಕಾರು: ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಡಿ.16 ರಿಂದ ಜ.14 ರ ತನಕ ಬೆಳಿಗ್ಗೆ ಧನು ಪೂಜೆ ನಡೆಯುತ್ತಿದ್ದು ಜ.13 ರಂದು ಬೆಳಿಗ್ಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಉಪ್ಪಿನಂಗಡಿ ತಾಲೂಕಿನ ಉಪ್ಪಿನಂಗಡಿ ಗಾಣಿಗ ಸಮುದಾಯ‌ಭವನ‌ ಶಾಖೆ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಶಾಖೆ, ಆಲಂಕಾರು ಶ್ರೀ ಭಾರತಿ ಶಾಖೆ, ಕೊಯಿಲ ಸದಾಶಿವ ಶಾಖೆ, ನೆಲ್ಯಾಡಿ ‌ಶಾಖೆಯವರಿಂದ ಯೋಗ ಶಿವ ನಮಸ್ಕಾರ ಕಾರ್ಯಕ್ರಮ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಬೆಳಿಗ್ಗೆ 04:45 ರಿಂದ ಭಜನೆ, ಪಂಚಾಂಗ ಪಠಣ, ಅಮೃತ ವಚನ, ಮಾನಸಿಕ ಸಿದ್ದತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರ, ಶಿವ ನಮಸ್ಕಾರ ನಡೆಯಿತು. ಗಾಯತ್ರೀ ಭಜನೆ, ಪ್ರಶಾಂತ ಅಮೃತ ವಾಚನ, ಪದ್ಮನಾಭ ಪಂಚಾಂಗ ಪಠಣ, ಮಾನಸಿಕ ಸಿದ್ದತೆ ಉಸಿರಾಟ ಕ್ರಿಯೆ ನೆರವೇರಿಸಿದರು. ಗಣಪತಿ ನಮಸ್ಕಾರವನ್ನು ಯೋಗ ಶಿಕ್ಷಕರಾದ ಪ್ರದೀಪ ಆಚಾರ್ಯ ನೇರವೆರಿಸಿ ಪ್ರಾತ್ಯಕ್ಷತೆಯಲ್ಲಿ ಉಪ್ಪಿನಂಗಡಿ ಶಾಖೆಯ ಶಿಕ್ಷಕರಾದ ಯಶೋದರ ಹಾಗೂ ಚಂದ್ರವತಿ ಭಾಗವಹಿಸಿದ್ದರು.

ಶಿವ ನಮಸ್ಕಾರ ಆಲಂಕಾರು ಶ್ರೀ ಭಾರತಿ ಶಾಖೆಯ ಶಿಕ್ಷಕಿ ಮಲ್ಲಿಕಾ, ನೆಲ್ಯಾಡಿ ಶಬರೀಶ ಶಾಖೆಯ ಮುರಳಿ ಮೋಹನ ವಿವರಣೆ ನೀಡಿ ಪ್ರಾತ್ಯಕ್ಷತೆಯಲ್ಲಿ ಯೋಗಬಂಧುಗಳಾದ ಶರ್ಮಿಳಾ ಹಾಗೂ ಹರಿಪ್ರಸಾದ್, ಪ್ರಸಾದ್ ಮತ್ತು ಸುಧಾ ಭಾಗವಹಿಸಿದರು ಮಾರ್ಗದರ್ಶಕರಾದ ಆನಂದ ಕುಂಟಿನಿ ಬೌದ್ದಿಕ್ ನೀಡಿ, ಉಪ್ಪಿನಂಗಡಿ ತಾಲೂಕಿನ ಸಂಚಾಲಕರಾದ ಸಂತೋಷ ರವರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಲ್ಲಿ ನಡೆಯುವ ಕಾರ್ಯಚಟುವಟಿಕೆ ಹಾಗೂ ಶಾಖೆಗಳ ಬಗ್ಗೆ ತಿಳಿಸಿ ಶಿಕ್ಷಕರಾದ ಸದಾಶಿವ ಶೆಟ್ಟಿ ಮಾರಂಗ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ತಾಲೂಕಿನ ಆಲಂಕಾರು ಭಾರತಿ ಶಾಖೆ, ಕೊಯಿಲ ಸದಾಶಿವ ಶಾಖೆ,ಉಪ್ಪಿನಂಗಡಿ ಗಾಣಿಗ ಸಮುದಾಯ ಭವನ ಶಾಖೆ ,ಸಹಸ್ರಲಿಂಗೇಶ್ವರ ಶಾಖೆ,ನೆಲ್ಯಾಡಿ ಶಬರೀಶ ಶಾಖೆಯ ಶಿಕ್ಷಕರು,ಸಂಚಾಲಕರು ಯೋಗಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ದೇವಸ್ಥಾನದ ಅಡಳಿತ ಮಂಡಳಿ,ಅರ್ಚಕರು,ಸಿಬ್ಬಂದಿ ವರ್ಗ ,ಊರವರು ಕಾರ್ಯಕ್ರಮದಲ್ಲಿ ಸಹಕರಿಸಿದರು

LEAVE A REPLY

Please enter your comment!
Please enter your name here