ನೆಲ್ಯಾಡಿ: ಇಲ್ಲಿನ ಬಾಲಯೇಸು ದೇವಾಲಯದ ವಾರ್ಷಿಕ ಹಬ್ಬ ಜ.14ರಂದು ಸಡಗರದಿಂದ ನಡೆಯಿತು.
ರೆ.ಫಾ. ವಿನ್ಸೆಂಟ್ ಡಿ’ಸೋಜಾ ರೆಕ್ಟರ್ ಕೃಪಾಸದನ ಬಜ್ಪೆ ಇವರು ದಿವ್ಯಬಲಿ ಪೂಜೆ ನೆರವೇರಿಸಿ ಹಬ್ಬದ ಸಂದೇಶ ನೀಡಿದರು. ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂದನಿಯ ಫಾ. ಲಾರೆನ್ಸ್ ಮಸ್ಕೇರೆನ್ಹಸ್ ಉಪಸ್ಥಿತರಿದ್ದರು. ವಿವಿಧ ಚರ್ಚ್‌ಗಳ ಧರ್ಮಗುರುಗಳು ಬಲಿ ಪೂಜೆಯಲ್ಲಿ ಭಾಗವಹಿಸಿದರು. ಭಕ್ತಾದಿಗಳು ಸಮರ್ಪಿಸಿದ ಹೊರೆಕಾಣಿಕೆ ವಸ್ತುಗಳ ಏಲಂ ಪೂಜೆಯ ನಂತರ ನಡೆಯಿತು.
ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮಗುರು ರೆ. ಫಾ. ಗ್ರೇಶನ್ ಅಲ್ವಾರಿಸ್‌ರವರು ಹಬ್ಬದ ಶುಭಾಶಯ ಕೋರಿದರು. ದೇವಾಲಯದ ಸದಸ್ಯರು ತಯಾರಿಸಿದ ಭೋಜನದೊಂದಿಗೆ ವಾರ್ಷಿಕ ಹಬ್ಬ ಸಂಪನ್ನಗೊಂಡಿತು.