ಪುತ್ತೂರು: ಬಿಂದು ಪ್ರೀಮಿಯರ್ ಲೀಗ್ ಎಸ್. ಜಿ ಸಹಾಭಾಗಿತ್ವದಲ್ಲಿ ಬಿಪಿಎಲ್ ಟ್ರೋಫಿ 2025 ನರಿಮೊಗರು ಶಾಲಾ ವಠಾರದಲ್ಲಿ ಜ 19ರಂದು ನಡೆಯಿತು. ಪುತ್ತೂರು ಆರಕ್ಷಕ ಠಾಣೆಯ ಪೊಲೀಸ್ ಉಪನಿರಿಕ್ಷಕ ಆಂಜನೇಯ ರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಮೇಘ ಫ್ರುಟ್ ಪ್ರೋಸೆಸಿಂಗ್ ಫ್ಯಾಕ್ಟ್ರಿ ಮ್ಯಾನೇಜರ್ ಲಕ್ಷ್ಮೀ ನಾರಾಯಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್. ಜಿ ಕಾರ್ಪೋರೇಟ್ಸ್ ಎಕ್ಸ್ ಕ್ಯೂಟಿವ್ ಡೈರೆಕ್ಟರ್ ರಂಜಿತ ಶಂಕರ್, ಎಸ್. ಜಿ ಕಾರ್ಪೋರೇಟ್ಸ್ ಡೈರೆಕ್ಟರ್ ಮನಸ್ವಿತ್ ಶಂಕರ್,ಎಸ್. ಜಿ ಕಾರ್ಪೋರೇಟ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತ್ಯಶಂಕರ್ ಭಟ್, ಪ್ರವೀಣ್ ಕ್ಯಾಪಿಟಲ್ ಚೀಫ್ ಎಕ್ಸ್ ಕ್ಯೂಟಿವ್ ಆಫೀಸರ್ ಅಮೋಘ ಜೆ ರೈ, ಮೇಘ ಫ್ರುಟ್ ಪ್ರೋಸೆಸಿಂಗ್ ಪರ್ ಚೆಸ್ ಹೆಡ್ / ಎಡ್ಮಿನ್ ನಾಗರಾಜ್ ರಾವ್, ಪ್ರವೀಣ್ ಕ್ಯಾಪಿಟಲ್ ಡೆಪ್ಯೂಟಿ ಜನರಲ್ ಮೆನೇಜರ್ ಶ್ರೀವತ್ಸರಾಜ್ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ಸತೀಶ್ ಪ್ರಭು ಸ್ವಾಗತಿಸಿ, ಚೇತನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಸಮಾರಂಭದದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನ್ಯಾಷನಲ್ ಪ್ರೋಕ್ರೂರ್ ಮೆಂಟ್ ಮ್ಯಾನೇಜರ್ ಮುರಳೀಧರ, ಬಿಂದು ಬಾಟ್ಲಿಂಗ್ ಮ್ಯಾನೇಜರ್ ಸುರೇಶ್ ಭಟ್, ಸೆಕ್ಯೂರಿಟಿ ಮ್ಯಾನೇಜರ್ ಗೋವಿಂದ ಭಟ್, ಸಿಪ್ ಅನ್ ಮ್ಯಾನೇಜರ್ ಸತೀಶ್ ಪ್ರಭು,ಸಿ.ಎಫ್.ಡಿ ಮ್ಯಾನೇಜರ್ ಧನ್ಯರಾಜ್ ಗೌಡ, ಟೆಟ್ರಾ ಪ್ಯಾಕ್ ಮ್ಯಾನೇಜರ್ ಶಿವರಾಜ್, ಸ್ನಾಕ್ ಅಪ್ ಮ್ಯಾನೇಜರ್ ಸುಭಾಷ್, ಟ್ರಾನ್ಸ್ ಪೋರ್ಟ್ ವಿಠಲ ಜೋಗಿ, ಎಸ್.ಜಿ ಕಾರ್ಪೋರೇಟ್ಸ್ ಸ್ಟೋರ್ ಮ್ಯಾನೇಜರ್ ವಿಶ್ವನಾಥ ಜೋಗಿ ಪುರುಷರಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ವಿಜೇತರ ವಿವರ:
ಬಿಂದು ಪ್ರೀಮಿಯರ್ ಲೀಗ್ ಪಂದ್ಯಾಟದಲ್ಲಿ ಭವನಿಶ್ ಮಾಲಕತ್ವದ ಕ್ಯಾಪಿಟಲ್ ಸ್ಟ್ರೈಕರ್ಸ್ ಪ್ರಥಮ ಸ್ಥಾನ ಪಡೆದರೆ, ಯೋಗೇಂದ್ರ ಜೆ. ಎಂ. ಎಂ. ಎಸ್ ವಾರಿಯರ್ಸ್ ಅಪ್ ದ್ವಿತೀಯ ಸ್ಥಾನ ಪಡೆದುಕೊಂಡರು.