ಪುತ್ತೂರು: ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀಷಣ್ಮುಖ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಜ.21ರಂದು ಆಶ್ಲೇಷ ಬಲಿ ಪೂಜೆ, ನಾಗದೇವರಿಗೆ ಕಲಶಾಭಿಷೇಕಗಳು ನೆರವೇರಿತು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಜಾತ್ರೋತ್ಸವದಲ್ಲಿ ಬೆಳಿಗ್ಗೆ ಆಶ್ಲೇಷ ಬಲಿ ಪೂಜೆ, ನಾಗದೇವರಿಗೆ ಕಲಶಾಭಿಷೇಕಗಳು, ತಂಬಿಲ ಸೇವೆ, ಶ್ರೀಮಹಾವಿಷ್ಣು ಆರಾಧನೆ, ಶ್ರಿಷಣ್ಮುಖ ಭಜನಾ ಮಂಡಳಿ ಪೆರ್ಲಂಪಾಡಿ ಮತ್ತು ಆದಿಶಕ್ತಿ ಭಜನಾ ತಂಡ ಕಲಾಯಿ ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಳ, ಪ್ರಧಾನ ಕಾರ್ಯದರ್ಶಿ ಕೆ.ಎಂ ಸುಬ್ರಹ್ಮಣ್ಯ ಕಟ್ಟಪುಣಿ, ಗೌರವಾಧ್ಯಕ್ಷ ಕೆ.ಆರ್ ಲಕ್ಷ್ಮಣ ಗೌಡ ಕುಂಟಿಕಾನ, ಆಡಳಿತಾಧಿಕಾರಿ ಮಂಜುನಾಥ ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಜೆ ದುಗ್ಗಳದಿಂದ ಶ್ರೀ ಇರ್ವೆರು ಉಳ್ಳಾಕ್ಲು ದೈವದ ಭಂಡಾರ ಮತ್ತು ಶ್ರೀರಾಜನ್ ದೈವ(ಶಿರಾಡಿ)ದ ಭಂಡಾರ ಶ್ರೀ ದೇವರ ಸನ್ನಿಧಿಗೆ ಆಗಮನ, ರಾತ್ರಿ ಮಹಾಪೂಜೆ, ಶ್ರೀದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ, ಕಟ್ಟೆಪೂಜೆ, ಅಶ್ವತ್ಥಕಟ್ಟೆ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಬೊಳ್ಳಿ ಬೊಲ್ಪುದ ಬಂಗಾರ್ ಕಲಾವಿದೆರ್ ಮಾಲೆತ್ತೋಡಿ ಅಭಿನಯದ `ಬಂಗಾರ್‌ದ ಬದ್ಕ್’ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.