ಶಿಬರಾಡಿ ಬಾರಿಕೆ ಕುಂದರ್ ಕುಟುಂಬದಲ್ಲಿ ವಾರ್ಷಿಕ ನೇಮೋತ್ಸವ

0

ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಶಿಬರಾಡಿ ಬಾರಿಕೆ ಕುಂದರ್ ಕುಟುಂಬದಲ್ಲಿ ಗ್ರಾಮದ ಉಳ್ಳಾಕುಲು, ಮಹಿಷಂತಾಯ ಮತ್ತು ಪಿಲಿಚಾಮುಂಡಿ ದೈವಗಳಿಗೆ ತಂಬಿಲ ಸೇವೆ ಹಾಗೂ ತರವಾಡು ಮನೆಯ ದೈವಗಳ ವಾರ್ಷಿಕ ನೇಮೋತ್ಸವವು ಜ.18 ಹಾಗೂ 19 ರಂದು ಶಿಬರಾಡಿ ಬಾರಿಕೆ ತರವಾಡು ಮನೆಯಲ್ಲಿ ಜರಗಿತು.


ಶಿಬರಾಡಿ ಬಾರಿಕೆ ಕುಂದರ್ ತರವಾಡಿನಲ್ಲಿ ನೆಲೆ ನಿಂತು ಕುಟುಂಬವನ್ನು ಕಾಪಾಡಿಕೊಂಡು ಬರುತ್ತಿರುವ ದೈವಗಳಿಗೆ ವೈಭವದ ನೇಮೋತ್ಸವ ಸಂಪನ್ನಗೊಂಡಿದೆ. ಶನಿವಾರದಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ, ಗ್ರಾಮ ದೈವಗಳಿಗೆ ತಂಬಿಲ ಸೇವೆ, ನಾಗದೇವರಿಗೆ ಮತ್ತು ರಕ್ತೇಶ್ವರಿ, ಗುಳಿಗನಿಗೆ ತಂಬಿಲ ಸೇವೆ, ಮಧ್ಯಾಹ್ನ ಹರಿಸೇವೆ, ಅನ್ನಸಂತರ್ಪಣೆ, ಸಂಜೆ ಜಾಗದ ರಾಹು ಗುಳಿಗನಿಗೆ ತಂಬಿಲ ಸೇವೆ ಬಳಿಕ ಭಂಡಾರ ತೆಗೆಯುವುದು, ರಾತ್ರಿ ಅನ್ನ ಸಂತರ್ಪಣೆ, ಕಲ್ಲುರ್ಟಿ ಹಾಗೂ ಕಲಾಲ್ದಗುಳಿಗ ನೇಮ, ವರ್ಣರ ಹಾಗೂ ಕುಪ್ಪೆ ಪಂಜುರ್ಲಿ ನೇಮ, ಆದಿತ್ಯವಾರದಂದು ಬೆಳಿಗ್ಗೆ ಧರ್ಮದೈವ ಧೂಮಾವತಿ ನೇಮ ಹಾಗೂ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾವಿರಾರು ಮಂದಿ ಅನ್ನಸಂತರ್ಪಣೆಯನ್ನು ಸ್ವೀಕರಿಸಿದರು.


ಅರ್ಚಕರಾದ ಪ್ರಕಾಶ್ ರಾವ್ ಕೊಡ್ಲಾರುರವರ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ನಡೆದವು. ಈ ಶ್ರದ್ಧಾ ಭಕ್ತಿ ಕಾರ್ಯದಲ್ಲಿ ಶಿಬರಾಡಿ ಬಾರಿಕೆ ತರವಾಡು ಕುಟುಂಬಸ್ಥರು ಹಾಗೂ ಸರ್ವ ಸದಸ್ಯರು ಸೇರಿದಂತೆ ಸುಮಾರು ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ತರವಾಡು ಅಧ್ಯಕ್ಷ ಸುರೇಂದ್ರ ರೈ ಮೊಟ್ಟೆತ್ತಡ್ಕರವರು ಭಕ್ತಾಧಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here