ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಹನುಮಾನ್ ನಗರ ಕಡಬ ಇಲ್ಲಿ ಭಾರತ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ನಡೆದ ರಾಮಾಯಣ ಪರೀಕ್ಷೆಯಲ್ಲಿ ಅಶ್ವಿನಿ ಕೆ 8ನೇ ತರಗತಿ, ಮಹಾಭಾರತ ಪರೀಕ್ಷೆಯಲ್ಲಿ ಸಿಂಚನಾ ಕೆ.ಎಸ್ 9ನೇ ತರಗತಿ ಹಾಗೂ ರಾಮಾಯಣ ಪರೀಕ್ಷೆಯಲ್ಲಿ ವರ್ಷಾ ಎಸ್ 10ನೇ ತರಗತಿ ಅತ್ಯುತ್ತಮ ಶ್ರೇಣಿಯನ್ನು ಪಡೆದುಕೊಂಡಿರುತ್ತಾರೆ.
7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 6 ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದು ಕೊಟ್ಟಿರುತ್ತಾರೆ. ಇವರಿಗೆ ಶಿಕ್ಷಕರಾದ ಜಲಜಾಕ್ಷಿ ಬಿ ವಿ ತರಬೇತಿ ನೀಡಿರುತ್ತಾರೆ.