ಮಾಡಾವುಕಟ್ಟೆಯಿಂದ ಕಟ್ಟತ್ತಾರು ತನಕ ಸ್ವಚ್ಛತೆ, ನೂರಾರು ಮಂದಿ ಭಾಗಿ
ಪುತ್ತೂರು: ಸ್ವಚ್ಚ ಸಂಸ್ಕೃತಿ ನಮ್ಮ ಸಂಸ್ಕೃತಿ ಎಂಬ ಧ್ಯೇಯದೊಂದಿಗೆ ತಾಲೂಕು ಪಂಚಾಯತ್ ಮತ್ತು ವಿವಿಧ ಇಲಾಖೆಗಳ ನೇತೃತ್ವದಲ್ಲಿ ಕೆಯ್ಯೂರು ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯುತ್ತಿದ್ದು ಮಾಡಾವು ಕಟ್ಟೆಯಿಂದ ಕಟ್ಟತ್ತಾರು ವರೆಗೆ ಜಿಲ್ಲಾ ಪಂಚಾಯತ್ ರಸ್ತೆಯ ಬದಿ, ಬಸ್ಸು ತಂಗುದಾಣ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹಾಗೂ ಸದಸ್ಯರು ಮತ್ತು ಸಿಬ್ಬಂದಿ ವರ್ಗ, ಗ್ರಾಮ ಆಡಳಿತಾಧಿಕಾರಿ ಮತ್ತು ಸಿಬ್ಬಂದಿ ವರ್ಗ,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶ್ರೀ ದುರ್ಗಾಂಬಿಕಾ ಗ್ರಾಮ ಮಟ್ಟದ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಕೆಪಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪಾನ್ಯಾಸಕರು ಮತ್ತು ವಿದ್ಯಾರ್ಥಿಗಳು, ಪ್ರೌಢಶಾಲೆಯ ಉಪ ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು, ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ, ಪೊರ್ಲುದ ಕೆಯ್ಯೂರು 2025 ವಿಷನ್ ಮತ್ತು ವರ್ತಕರ ಸಂಘ ಮಾಡಾವು, ಕೆಯ್ಯೂರು ಅಯ್ಯಪ್ಪ ಭಕ್ತ ವೃಂದ ಮಾಡಾವು, ಎಸ್ ಕೆ ಎಸ್ ಎಸ್ ಎಫ್ , ವಿಖಾಯ ತಂಡ, ಅಭಿನವ ಫ್ರೆಂಡ್ಸ್ ಮಾಡಾವು, ಅಟೋ ಚಾಲಕ ಮಾಲಕ ಸಂಘ ಮಾಡಾವು, ಕೇಸರಿ ಫ್ರೆಂಡ್ಸ್ ಸಂತೋಷ್ ನಗರ, ಶ್ರೀ ದುರ್ಗಾ ಸ್ಪೋಟ್ಸ್ ಕ್ಲಬ್ ಕೆಯ್ಯೂರು, ಸದ್ರಿ ಸಂಘ ಸಂಸ್ಥೆಯವರು ಭಾಗವಹಿಸಿದ್ದಾರೆ.