ಪುತ್ತೂರು: ಪುತ್ತೂರು ಬೊಳುವಾರು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 76ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ಜ.26ರಂದು ನಡೆಯಿತು.
ಮೋಹನ್ ರಾಜ್ ಶೆಟ್ಟಿಯವರು ನೀಡಿದ ನೂತನ ಧ್ವಜ ಕಟ್ಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಸಂತೋಷ್ ಕುಮಾರ್ ಬೊಳುವಾರು, ಮುಖ್ಯೋಪಾಧ್ಯಾಯಿನಿ ಮೋನಿಕಾ ಪಿ. ಮಾಡ್ತಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ರೇಷ್ಮಾ, ಪ್ರಧಾನ ಕಾರ್ಯದರ್ಶಿ ಈಶ್ವರ್ ನಾಯ್ಕ್, ಪದವೀಧರ ಶಿಕ್ಷಕಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಮಲ್ಲಿಕಾ. ಬಿ., ಹಿರಿಯ ವಿದ್ಯಾರ್ಥಿಗಳಾದ ಡಾ. ಚಂದ್ರಶೇಖರ್, ಆಂಟೊನಿ ಒಲಿವೆರಾ, ಜಯಂತ್ ಉರ್ಲಾಂಡಿ, ಚಂದ್ರಕಾಂತ್ ಉರ್ಲಾಂಡಿ, ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಅತಿಥಿಗಳು ಗಣರಾಜ್ಯೋತ್ಸವದ ಕುರಿತು ಹಿತನುಡಿಗಳನ್ನಾಡಿದರು. ವಿದ್ಯಾರ್ಥಿಗಳಿಂದ ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.