ಪುತ್ತೂರು: ಸವಣೂರು ಗ್ರಾ.ಪಂ.ಗೆ ಒಳಪಟ್ಟ ಕನ್ನಡಕುಮೇರು ಎಂಬಲ್ಲಿ ರಸ್ತೆ ಬದಿಯಲ್ಲೇ ಕಸದ ಕೊಂಪೆ ತುಂಬಿದ್ದು. ಬೀದಿ ನಾಯಿಗಳ ಕಾಟದಿಂದ ಅದು ಎಲ್ಲೆಡೆ ಹರಡಿ, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇತ್ತು, ಇದನ್ನು ಮನಗಂಡ ‘ಸುದ್ದಿ ವೆಬ್ ನ್ಸೂಸ್’ ಸಮಗ್ರ ವರದಿ ಮಾಡಿತ್ತು. ಇದೀಗ ಸವಣೂರು ಗ್ರಾಮ ಪಂಚಾಯತ್ ವತಿಯಿಂದ ಕಸವನ್ನು ಜ. 26 ರಂದು ತೆರವುಗೊಳಿಸಿದ್ದಾರೆ.ಹಾಗೂ ಕಸವನ್ನು ಸುರಿಯುವವರಿಗೆ ಎಚ್ಚರಿಕೆ ನೀಡುವ ನಾಮಫಲಕವನ್ನು ಅಳವಡಿಸಿದ್ದಾರೆ.
ಕಸ ಹಾಕುವರಿಗೆ ಕಠಿಣ ಕ್ರಮ ಹಾಗೂ 500 ರೂಪಾಯಿ ದಂಡ ಹಾಕುವುದಾಗಿ ಫಲಕದಲ್ಲಿ ಉಲ್ಲೇಖ ಮಾಡಲಾಗಿದೆ. ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಂಬಿಲ, ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಸದಸ್ಯರುಗಳಾದ ತೀರ್ಥರಾಮ್ ಕೆಡೆಂಜಿ, ಶೀನಪ್ಪ ಶೆಟ್ಟಿ ನೆಕ್ರಾಜೆ, ಗ್ರಾ.ಪಂ ಪಿಡಿಓ ಸಂದೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದರು.