ಕುದ್ಮಾರು ಶಾಲೆಯಲ್ಲಿ ಗಣರಾಜ್ಯೋತ್ಸವ

0

ಕಾಣಿಯೂರು: ಕುದ್ಮಾರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಶಾಲೆಯಲ್ಲಿ 76ನೇ ಗಣರಾಜ್ಯ ದಿನಾಚರಣೆಯನ್ನು ಆಚರಿಸಲಾಯಿತು.


ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ನವ್ಯ ಅನ್ಯಾಡಿ ಇವರು ಧ್ವಜಾರೋಹಣ ನೆರವೇರಿಸಿದರು. ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆಗೈದರು. ಸಂವಿಧಾನದ ಪೀಠಿಕೆ, ಅರ್ಥ, ಮಹತ್ವ, ಮೂಲಭೂತ ಹಕ್ಕುಗಳು, ಕರ್ತವ್ಯಗಳು ಇವುಗಳ ಬಗ್ಗೆ ಆರನೇ ತರಗತಿಯ ವಿದ್ಯಾರ್ಥಿನಿಯರಾದ ವಂದನಾ ಕೆ ಹೆಚ್, ಆಯಿಷತ್ ಜಸ್ರೀನಾ, ಪ್ರಣಾವಿ, ವೈಷ್ಣವಿ ಎಸ್, ಯಜ್ಞ ಎಚ್ಎಸ್ ಇವರು ಮಾಹಿತಿ ನೀಡಿದರು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರಿಯಾಂಕ ಇವರು ದಿನದ ಮಹತ್ವದ ಬಗ್ಗೆ ಮಾತನಾಡಿದರು.


ಶಾಲಾ ಮುಖ್ಯಗುರು ಕುಶಾಲಪ್ಪ ಬಿ ಸ್ವಾಗತಿಸಿ, ಶಿಕ್ಷಕಿ ವೀರಾ ಡಿಸೋಜ ವಂದಿಸಿದರು. ಎಸ್ ಡಿ ಎಂ ಸಿ ಸದಸ್ಯರಾದ ಸದಾನಂದ ಎಸ್, ರಮ್ಯಾ ಪಟ್ಟೆ ಉಪಸ್ಥಿತರಿದ್ದರು. ಶಾಲಾ ಶಿಕ್ಷಕವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here