ನೆಲ್ಯಾಡಿ: ನೆಲ್ಯಾಡಿ ಸಮೀಪ ಜ.27ರಂದು ಬೆಳಿಗ್ಗೆ ಕಾಡುಕೋಣವೊಂದು ಜನ ವಸತಿ ಪ್ರದೇಶದಲ್ಲಿ ಸಂಚಾರ ಮಾಡಿ ಜನರಲ್ಲಿ ಭಯ ಉಂಟು ಮಾಡಿದೆ.
ನೆಲ್ಯಾಡಿಯ ಸೈಂಟ್ ಜಾರ್ಜ್ ಕಾಲೇಜು, ಕೊಲ್ಯೊಟ್ಟು ಅಂಗನವಾಡಿ ಇತ್ಯಾದಿ ಸ್ಥಳಗಳಲ್ಲಿ ಕಾಡುಕೋಣ ಓಡಾಡಿದ್ದು, ಶಾಲಾ ಕಾಲೇಜುಗಳಿಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಭಯದ ವಾತಾವರಣ ಉಂಟು ಮಾಡಿದೆ. ಬಳಿಕ ಕೊಲ್ಯೊಟ್ಟು ಕೆಳಗಿನ ಪರಾರಿ ಜಯಾನಂದ ಬಂಟ್ರಿಯಾಲ್ ಅವರ ತೋಟದ ಮೂಲಕ ಕೊಪ್ಪ ಮಾದೇರಿ ಭಾಗಕ್ಕೆ ತೆರಳಿದೆ ಎಂದು ವರದಿಯಾಗಿದೆ.