ದೋಳ್ಪಾಡಿ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವ

0

ಕಾಣಿಯೂರು: ದೋಳ್ಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಎಸ್. ಡಿ.ಎಂ.ಸಿ ಅಧ್ಯಕ್ಷ ದಿವಾಕರ ಮರಕ್ಕಡರವರು ದ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಲೋಕಯ್ಯ ಪರವ, ಅಂಬಾಕ್ಷಿ ಕೂರೇಲು ಉಪಸ್ಥಿತರಿದ್ದರು. ಮುಖ್ಯಗುರು ರೇವತಿ ಸ್ವಾಗತಿಸಿ, ವಿನೋದ ಕಾರ್ಯಕ್ರಮ ನಿರೂಪಿಸಿದರು. ರವಿರಾಜ್ ಮೊಳೆಯಾರ್ ವಂದಿಸಿದರು.


ಸನ್ಮಾನ- ಈ ಸಂದರ್ಭದಲ್ಲಿ ಶಾಲೆಗೆ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಿದ ಮತ್ತು ಪ್ರತಿಭಾವಂತ ಮಕ್ಕಳಿಗೆ ವಿದ್ಯಾಧನ್ ಸಂಸ್ಥೆಯಿಂದ ಸ್ಕಾಲರ್ ಶಿಪ್ ನೀಡುತ್ತಿರುವ ಸಂಸ್ಥೆಯ ಪ್ರಮುಖರಾದ ಕಟ್ಟ ವಿಶ್ವನಾಥರವರ ಪರವಾಗಿ ಇವರ ತಂದೆ ಕಟ್ಟ ಶಿವಪ್ಪ ಗೌಡ ರವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here