ಸ್ವಚ್ಛತಾ ಕಾರ್ಯ ದೇವರ ಕಾರ್ಯ…

0
ಅನ್ನಪೂರ್ಣಿಮ ಆರ್ ರೈ
ಕುತ್ಯಾಡಿ

ಅರಿಯಡ್ಕ: ನಮ್ಮ ಸಂಸ್ಕೃತಿ – ಸ್ವಚ್ಛ ಸಂಸ್ಕೃತಿ ಶಿರೋನಾಮೆಯಡಿ ಸ್ವಚ್ಛತಾ ಆಂದೋಲನವನ್ನು ಪಂಚಾಯತ್, ವಿವಿಧ ಸಂಘ ಸಂಸ್ಥೆಗಳು ಮಾಡುವುದು ಸರ್ವೆ ಸಾಮಾನ್ಯ.
ಆದರೆ ಅರಿಯಡ್ಕ ಗ್ರಾಮದ ಕುತ್ಯಾಡಿ ಪರಿಸರದಲ್ಲಿ ಕೆಲವು ವರ್ಷಗಳಿಂದ ರಾಜೀವ ರೈ ಮತ್ತು ಅವರ ಧರ್ಮಪತ್ನಿ ಅನ್ನಪೂರ್ಣಿಮಾ ಆರ್ ರೈ ಹಾಗೂ ಕಾರ್ಮಿಕರನ್ನು, ನೆರೆಕರೆಯ ಜನರನ್ನು ಸೇರಿಸಿಕೊಂಡು,ಸ್ವ ಇಚ್ಚೆಯಿಂದ ಅವರ ಪರಿಸರದಲ್ಲಿ, ರಸ್ತೆ ಬದಿ, ನೀರು ಹರಿಯುವ ತೋಡು, ಮುಂತಾದ ಭಾಗಗಳಲ್ಲಿ,ಸ್ವಚ್ಛತೆ ಮಾಡುವ ಮುಖಾಂತರ ಸಮಾಜಕ್ಕೆ ಮಾದರಿಯಾಗಿದ್ದಾರೆ .ಇಂತಹ ಪ್ರಾಮಾಣಿಕತೆ , ಪ್ರತಿಯೊಬ್ಬರಲ್ಲಿ ಇದ್ದಾಗ ನಮ್ಮ ನಾಡು ಸ್ವಚ್ಛವಾಗುವುದರಲ್ಲಿ ಸಂಶಯವಿಲ್ಲ………….

ಸ್ವಚ್ಛತೆ ಎಂಬುದು ನಮ್ಮ ಸಂಸ್ಕೃತಿ.ಇದು ಯಾರು ಹೇಳಿ ಕೊಟ್ಟು ಬರುವುದಲ್ಲ, ನಮಗೆ ನಮ್ಮ ಪರಿಸರದ‌ ಮೇಲೆ ಪ್ರೀತಿ, ಕಾಳಜಿ,ಗೌರವ ಇದ್ದಾಗ ಅದುವೇ ನಮ್ಮನ್ನು ಎಚ್ಚರಿಸುವ ಕೆಲಸ ಕಾರ್ಯಗಳನ್ನು ಮಾಡುತ್ತದೆ ಹಾಗೂ ಮಾಡಿಸುತ್ತದೆ…
ಅನ್ನಪೂರ್ಣಿಮ ಆರ್ ರೈ
ಕುತ್ಯಾಡಿ

LEAVE A REPLY

Please enter your comment!
Please enter your name here