*ತರಬೇತಿಗೂ ಸೂಕ್ತವಾಗಿರುವ ಈಜುಕೊಳ
*ಸುಸಜ್ಜಿತ ಹವಾನಿಯಂತ್ರಿತ ಸಭಾಂಗಣ, ಅತಿಥಿ ಕೊಠಡಿಗಳು
*ದಕ್ಷಿಣ ಕನ್ನಡದಲ್ಲೇ ಪ್ರಥಮ ಸಿಂಥೆಟಿಕ್ ಅತ್ಯಾಧುನಿಕ ಟೆನ್ನಿಸ್ ಕೋರ್ಟ್
*ಆರೋಗ್ಯವಂತ ಜೀವನಕ್ಕೆ ಮಲ್ಟಿ ಜಿಮ್
*ಸುಸಜ್ಜಿತ ಬ್ಯಾಡ್ಮಿಂಟನ್ ಕೋರ್ಟ್, ಟೇಬಲ್ ಟೆನ್ನಿಸ್ ಸಹಿತ ಹಲವು ಸೌಲಭ್ಯ
ಪುತ್ತೂರು: 2012 ರಲ್ಲಿ ಸ್ಥಾಪಿತವಾದ ದಿ ಪುತ್ತೂರು ಕ್ಲಬ್ ಕಳೆದ ಒಂದು ದಶಕದಲ್ಲಿ ಸಮಾಜದ ವಿಶಾಲ ವಿಭಾಗದಿಂದ ತನ್ನ ಸದಸ್ಯರಿಗೆ ವಿವಿಧ ಕ್ರೀಡೆ, ಗೇಮಿಂಗ್ ಮತ್ತು ಮನೋರಂಜನಾ ಸೌಲಭ್ಯಗಳನ್ನು ಒದಗಿಸಿ ಮಹತ್ತರವಾಗಿ ಬೆಳೆದಿದ್ದು, ಇದೀಗ ವಿವಿಧ ಹೊಸ ಸೌಲಭ್ಯಗಳನ್ನು ಫೆ.8ರಂದು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್,ಎಸ್ ಎಲ್ ಬೋಜೆ ಗೌಡ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು,ನಗರಸಭೆ ಉಪಾಧ್ಯಕ್ಷ ಬಾಲಚಂದ್ರ,ಪುತ್ತೂರು ಕ್ಲಬ್ ಅದ್ಯಕ್ಷ ಡಾ ದೀಪಕ್ ರೈ, ದೀಪಕ್ ಕೆ ಪಿ, ವಿಶ್ವಾಸ್ ಶೆಣೈ, ಖಜಾಂಚಿ ದಿವಾಕರ್ ಕೆಪಿ,ಜೊತೆ ಕಾರ್ಯದರ್ಶಿ ಪ್ರಭಾಕರ್ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಬೂಡಿಯಾರು ರಾಧಾಕೃಷ್ಣ ರೈ, ವಿಶ್ವಾಸ್ ಶೆಣೈ, ರೂಪೇಶ್ ಶೇಟ್, ಜೊತೆ ಕಾರ್ಯದರ್ಶಿ ಪ್ರಭಾಕರ್ , ಶಿವರಾಮ ಆಳ್ವ, ನಿತಿನ್ ಪಕಳ ಅತಿಥಿಗಳನ್ನು ಗೌರವಿಸಿದರು.