ವೈದ್ಯಕೀಯ ವೃತ್ತಿಯಲ್ಲಿ ಸೇವೆಯೇ ಮೊದಲು; ಡಾ.ನಿರಂಜನ್ ರೈ
ಆಲಂಕಾರು; ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ, ನಿವೃತ್ತ ಶಿಕ್ಷಕ ಜತ್ತಪ್ಪ ಗೌಡ ಮತ್ತು ಶಿಕ್ಷಕಿ ಪುನಂತೇಶ್ವರಿ ದಂಪತಿಯ ಪುತ್ರಿ ಡಾ. ನವ್ಯಶ್ರೀ ಎ.ಜೆ.ಅವರ ’ಸ್ಪರ್ಶ ಕ್ಲಿನಿಕ್’ ಆಲಂಕಾರು ಪೇಟೆಯ ಜಿ.ಎಲ್.ಕಾಂಪ್ಲೆಕ್ಸ್ನಲ್ಲಿ ಫೆ.7ರಂದು ಶುಭಾರಂಭಗೊಂಡಿತು.
ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯ ವೈದ್ಯರಾದ ಡಾ.ನಿರಂಜನ್ ರೈ ಅವರು ಕ್ಲಿನಿಕ್ ಉದ್ಘಾಟಿಸಿದರು. ಎಡಮಂಗಲ ಪಟ್ಲದಮೂಲೆ ಶ್ರೀ ಆದಿಶಕ್ತಿ ದೇವಸ್ಥಾನದ ಮೊಕ್ತೇಸರರೂ, ಸ್ವಾಮೀಜಿಯೂ ಆದ ಮಾಯಿಲಪ್ಪ ಗೌಡ ಅವರು ದೀಪ ಪ್ರಜ್ವಲಿಸಿದರು. ಬಳಿಕ ಡಾ.ನಿರಂಜನ್ ರೈ ಅವರು ಮಾತನಾಡಿ, ವೈದ್ಯಕೀಯ ಕ್ಷೇತ್ರ ಸೇವಾ ಕ್ಷೇತ್ರವಾಗಿದೆ. ಆದ್ದರಿಂದ ಇಲ್ಲಿ ಸೇವೆಯೇ ಮೊದಲು. ಉತ್ತಮ ಸೇವೆ ನೀಡಿದಲ್ಲಿ ಹಣ, ಅಂತಸ್ತು, ಗೌರವ ಸಿಗುತ್ತದೆ. ವೈದ್ಯರ ಮೇಲೆ ಜನರಿಗೆ ನಂಬಿಕೆ ಮುಖ್ಯ. ಆದ್ದರಿಂದ ಜನರ ಪ್ರೀತಿ, ವಿಶ್ವಾಸ ಗಳಿಸಬೇಕು. ಯುವ ವೈದ್ಯೆಯಾಗಿರುವ ಡಾ.ನವ್ಯಶ್ರೀ ಅವರು ತಂದೆ, ತಾಯಿ, ಮನೆಯವರ ಆಶೀರ್ವಾದದೊಂದಿಗೆ ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಹೆಚ್ಚಿನ ಒತ್ತು ನೀಡುವಂತೆ ಹೇಳಿದರು.
![](https://puttur.suddinews.com/wp-content/uploads/2025/02/sparsha-2.jpg)
ಮೊಕ್ತೇಸರರಾದ ಮಾಯಿಲಪ್ಪ ಗೌಡ ಅವರು ಮಾತನಾಡಿ, ಯುವ ವೈದ್ಯಯಾಗಿರುವ ಡಾ.ನವ್ಯಶ್ರೀ ಅವರಿಗೆ ಜನರ ಸೇವೆ ಮಾಡುವ ಅವಕಾಶ ದೊರೆತಿದೆ. ಯಾವುದೇ ಲೋಪ ಆಗದಂತೆ ಜನರಿಗೆ ಉತ್ತಮ ಸೇವೆ ನೀಡುವ ಶಕ್ತಿಯನ್ನು ಅವರಿಗೆ ದೇವರು ಕರುಣಿಸಲಿ. ಹಿರಿಯರ ಆಶೀರ್ವಾದವೂ ಸಿಗಲಿ ಎಂದರು.
ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ ಮಾತನಾಡಿ, ಶಿಕ್ಷಕ ದಂಪತಿಯ ಪುತ್ರಿ ಡಾ.ನವ್ಯಶ್ರೀ ಅವರು ಆರಂಭಿಸಿರುವ ಕ್ಲಿನಿಕ್ನಿಂದ ಆಲಂಕಾರು ಹಾಗೂ ಸುತ್ತಲಿನ ಗ್ರಾಮದ ಜನರಿಗೆ ಉತ್ತಮ ಸೇವೆ ಸಿಗಲಿ. ಆಯುರ್ವೇದ ಕ್ಲಿನಿಕ್ ಆಲಂಕಾರಿಗೆ ಅತೀ ಮುಖ್ಯವಾಗಿತ್ತು. ಕ್ಲಿನಿಕ್ ಉನ್ನತ ಮಟ್ಟಕ್ಕೆ ಬೆಳೆದು ವೈದ್ಯರಿಗೂ ಉನ್ನತ ಹೆಸರು, ಕೀರ್ತಿ ಬರಲಿ ಎಂದರು. ಜಿ.ಎಲ್.ಕಾಂಪ್ಲೆಕ್ಸ್ ಮಾಲಕ ಯತೀಶ್ ಕೊರಂಬಾಡಿ, ನಿವೃತ್ತ ಮುಖ್ಯಶಿಕ್ಷಕ ಕುಶಾಲಪ್ಪ ಗೌಡ ಪೊಸೊಳಿಕೆ, ನಿವೃತ್ತ ಯೋಧ ವಿಶ್ವನಾಥ ಗೌಡ ನಾಗೋಜಿ, ವಕೀಲರಾದ ಮಹಾಬಲ ಗೌಡ ಅಡ್ಡಾಳಿ ಶುಭಹಾರೈಸಿದರು.
ಜಿ.ಎಲ್.ಕಾಂಪ್ಲೆಕ್ಸ್ನ ಮಾಲಕ ಗೋಪಣ್ಣ ಗೌಡ ಕೊರಂಬಾಡಿ, ಲಕ್ಷ್ಮೀರಾಮಣ್ಣ ಗೌಡ ಕೊರಂಬಾಡಿ, ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ., ಡಾ.ನವ್ಯಶ್ರೀ ಅವರ ಕುಟುಂಬಸ್ಥರು, ಸಂಬಂಧಿಕರು, ಶಿಕ್ಷಕರು, ಹಿತೈಷಿಗಳು, ಅಭಿಮಾನಿಗಳು, ಬಂಧುಮಿತ್ರರು ಆಗಮಿಸಿ ಶುಭಹಾರೈಸಿದರು. ಡಾ.ನವ್ಯಶ್ರೀ ಅವರ ತಂದೆ ನಿವೃತ್ತ ಶಿಕ್ಷಕ ಜತ್ತಪ್ಪ ಗೌಡ ಅವರು ಸ್ವಾಗತಿಸಿ, ನಿರೂಪಿಸಿದರು. ತಾಯಿ ಶಿಕ್ಷಕಿ ಪುನಂತೇಶ್ವರಿ ವಂದಿಸಿದರು.