ಪುತ್ತೂರು: ಬಿಳಿಯೂರು ಗ್ರಾಮದ ಕರ್ವೇಲ್‌ನಲ್ಲಿರುವ ತಾಜುಲ್ ಉಲಮಾ ಎಜುಕೇಶನಲ್ ಗಾರ್ಡನ್‌ನಲ್ಲಿ ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ಅವರ ಆಂಡ್ ನೇರ್ಚೆ ಫೆ.13ರಂದು ನಡೆಯಲಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಯೂಸೂಫ್ ಹಾಜಿ ಗೌಸಿಯ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಫೆ.13ರ ಬೆಳಿಗ್ಗೆ ಬನ್ನೂರು ಉಮರ್ ಹಾಜಿ ಅವರು ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಸ್ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ಮುರ ಅವರ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಲಿದೆ. ಅಬ್ದುಲ್ ಜಬ್ಬಾರ್ ಝೈನಿ ಕೂಟು ಝಿಯರತ್‌ಗೆ ನೇತೃತ್ವ ವಹಿಸಲಿದ್ದು, ಅಸ್ಸಯ್ಯಿದ್ ಹಬೀಬುಲ್ಲಾಹ್ ತಂಙಳ್ ಪೆರುವಾಯಿ ಉದ್ಘಾಟಿಸಲಿದ್ದಾರೆ.
ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಜಿ.ಎಲ್.ಕಾಮಿಲ್ ಸಖಾಫಿ ಪೆರ್ನೆ ಮುಂತಾದವರು ಸಂದೇಶ ಭಾಷಣ ಮಾಡಲಿದ್ದಾರೆ. ಅಸ್ಸಯ್ಯಿದ್ ಮುಸ್ತಾಕ್ ರಹ್ಮಾನ್ ತಂಙಳ್ ಚಟ್ಟೆಕ್ಕಲ್ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವರು ಉಲಾಮಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಜನರಲ್ ಕನ್ವೀನರ್ ಡಾ. ಉಮ್ಮರ್ ಫಾರೂಕ್, ಸ್ವಾಗತ ಸಮಿತಿ ಉಪಾಧ್ಯಕ್ಷ ಇಕ್ಬಾಲ್ ಬಪ್ಪಳಿಗೆ, ಅಬ್ದುಲ್ ಜಬ್ಬಾರ್ ಝೈನಿ, ಅಬೂಬಕ್ಕರ್ ಝಹ್ರಿ, ಸ್ವಾಲಿಹ್ ಮುರ ಉಪಸ್ಥಿತರಿದ್ದರು.