ಕಡಬ: ಪ್ರಸಿದ್ದ ಉರಗತಜ್ಞ ಕೇರಳದ ತಿರುವನಂತಪುರಂನ ಬಾವ ಸುರೇಶ್‌ರವರಿಗೆ ಫೆ.13ರಂದು ಕಡಬದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ತೋಮಸ್ ಇಡೆಯಾಲ್ ಅವರು ಸನ್ಮಾನಿಸಿದರು.
ಪ್ರಸಿದ್ದ ಉರಗ ತಜ್ಞ ಬಾವ ಸುರೇಶ್ ಅವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಲೆಂದು ತೆರಳುತ್ತಿದ್ದ ವೇಳೆ ಕಡಬದ ಬಿ.ಕೆ.ಜ್ಯೂಸ್ ಪಾಯಿಂಟ್ ಬಳಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿ.ಕೆ. ಜ್ಯೂಸ್ ಪಾಯಿಂಟ್ ಮಾಲಕ ಸಾಲೀಕ್ ಬಿ.ಕೆ, ಜಾಬಿ ಬಿ.ಕೆ, ಮುನ್ನಾ ಕಡಬ, ಸದಾನಂದ ಕೊಪ್ಪ, ರವೀಂದ್ರ, ಸಮೀರ್ ಕುಂತೂರು, ಇರ್ಫಾನ್ ಕಡಬ, ತೌಸಿಫ್,ನವಾಸ್ ಪನ್ಯ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.