ಪುತ್ತೂರು: ಪಡ್ನೂರು ಗ್ರಾಮದ ಶ್ರೀಮದಗ ಜನಾರ್ದನ ದೇವಸ್ಥಾನದ ಮುಂದಿನ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮತಿಗೆ ಸದಸ್ಯರನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿಯವರು ಆದೇಶಿಸಿದ್ದಾರೆ.
ಸಾಮಾನ್ಯ ಸ್ಥಾನದಿಂದ ದೇವಸ್ಥಾನದ ನಿಕಟರ್ಪೂ ಅಧ್ಯಕ್ಷ ಪಿ.ವೆಂಕಟ್ರಮಣ ಭಟ್ ಹಾರಕರೆ ಗೋಕುಲ ಪಡ್ನೂರು, ಕೆ.ಸತ್ಯನಾರಾಯಣ ರಾವ್ ಕುಂಜಾರು, ರೋಹನ್ ರಾಜ್ ಪಿ.ಎಸ್. ಮಾವಿನಕಟ್ಟೆ, ಮನೋಹರ ಎ. ಆರುವಾರ ಗುತ್ತು ಪೆರಾಬೆ, ರಾಧಾಕೃಷ್ಣ ಕುಂಜಾರು, ಪ.ಜಾತಿ ಮತ್ತು ಪ.ಪಂಗಡದಿಂದ ಬಾಳಪ್ಪ ನಾಯ್ಕ್ ಕೆ. ಸಂತೃಪ್ತಿ ದೇಮೇರು ಕುಂಜಾರು, ಮಹಿಳಾ ಸ್ಥಾನದಿಂದ ಸ್ವಪ್ನ ಯಸ್. ಚೈತ್ರನಾರಾಯಣ ಸೇಡಿಯಾಪು, ಶೋಭಾ ಶ್ರೀಧರ ಗೌಡ ಪೊಯ್ಯೆ, ಅರ್ಚಕ ವರ್ಗದಿಂದ ಶ್ರೀಕಾಂತ ಭಟ್‌ರವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.