ಪುತ್ತೂರು: ಪೆರುವಾಯಿ ಗ್ರಾಮದ ಬದಿಯಾರು ಶ್ರೀ ಮೂವರು ದೈವಗಳು, ಪಂಜುರ್ಲಿ ,ಪಿಲಿಚಾಮುಂಡಿ ಕ್ಷೇತ್ರದ ವಾರ್ಷಿಕ ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ದೈವಸ್ಥಾನಕ್ಕೆ ತೆರಳುವ ರಸ್ತೆಯನ್ನು ತುರ್ತಾಗಿ ಡಾಮರೀಕರಣ ಮಾಡುವಂತೆ ಶಾಸಕರಾದ ಅಶೋಕ್ ರೈ ಸೂಚನೆ ನೀಡಿದ್ದು ಅದರಂತೆ ಕಾಮಗಾರಿ ನಡೆಯುತ್ತಿದೆ.
ಪೆರುವಾಯಿ ಗ್ರಾಮದ ಐತಿಹಾಸಿಕ ಕ್ಷೇತ್ರವಾದ ಶ್ರೀ ಮೂವರು ದೈವಗಳು, ಪಂಜುರ್ಲಿ ಪಿಲಿಚಾಮುಂಡಿ ಕ್ಷೇತ್ರದ ವಾರ್ಷಿಕ ಜಾತ್ರೆ ಬಹಳ ವಿಜೃಂಬಣೆಯಿಂದ ನಡೆಯುತ್ತಿದೆ. ಕ್ಷೇತ್ರಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಹಲವು ವರ್ಷಗಳಿಂದ ದುರಸ್ಥಿಗಾಗಿ ಮನವಿ ಮಾಡಿದ್ದರು. ಕಳೆದ ಹತ್ತು ವರ್ಷಗಳಿಂದ ನಾದುರಸ್ಥಿಯಲ್ಲಿರುವ ರಸ್ತೆಯನ್ನು ಜಾತ್ರೆಗೆ ಮುನ್ನ ದುರಸ್ಥಿ ಕಾರ್ಯ ನಡೆಸುವಂತೆ ಶಾಸಕರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಾಯಬ್ಬೆ ಕನ್ಸ್ಟ್ರಕ್ಷನ್ ಗುತ್ತಿಗೆದಾರರು ಕಾಮಗಾರಿಯನ್ನು ನಡೆಸುತ್ತಿದ್ದಾರೆ.
ಪೆರುವಾಯಿ ಗ್ರಾಮದ ಈ ದೈವಸ್ಥಾನಕ್ಕೆ ತೆರಳುವ ರಸ್ತೆ ಕಳೆದ ಹತ್ತು ವರ್ಷಗಳಿಂದ ಹದಗೆಟ್ಟಿತ್ತು. ಈ ವಿಚಾರವನ್ನು ದೈವಸ್ಥಾನ ಸಮಿತಿಯವರು ನನ್ನ ಗಮನಕ್ಕೆ ತಂದಿದ್ದರು. ಮುಂದಿನ ವಾರ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯಲಿದ್ದು ಅಲ್ಲಿಗೆ ತೆರಳುವ ಭಕ್ತಾದಿಗಳಿಗೆ ನೆರವಾಗಲೆಂದು ಜಾತ್ರೆಗೆ ಮುನ್ನವೇ ಮುಂಗಡವಾಗಿ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದ್ದು ಅದರಂತೆ ಕಾಮಗಾರಿ ನಡೆದಿದೆ.
ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು