ಪುತ್ತೂರು: ಗುಂಡಿಲಗುತ್ತು ದಿ| ಡಾ.ನವೀನ್ ಕುಮಾರ್ ಶೆಟ್ಟಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಫೆ.23ರಂದು ಪುತ್ತೂರು ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ ನುಡಿ ನಮನ ಸಲ್ಲಿಸಿ, ಪೆರ್ಲಬೈಲು ರಾಮಣ್ಣ ಶೆಟ್ಟಿ ಮತ್ತು ಗುಂಡಿಲಗುತ್ತು ದೇವಕಿ ಶೆಟ್ಟಿಯವರ ಹಿರಿಯ ಮಗನಾಗಿದ್ದ ಡಾ.ನವೀನ್ಕುಮಾರ್ ಶೆಟ್ಟಿಯವರು ಪುತ್ತೂರಿನಲ್ಲಿ 40 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಅಗಲಿದ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಮೃತರ ಸಹೋದರ ಪ್ರವೀಣ್ ಶೆಟ್ಟಿ ಗುಂಡಿಲಗುತ್ತು, ಸಹೋದರಿಯರಾದ ಶಕೀಲ ಶೆಟ್ಟಿ, ಕೋಕಿಲ ಶೆಟ್ಟಿ, ಪತ್ನಿ ಮೊಗೆರೋಡಿ ರಾಜಲಕ್ಷ್ಮಿ ಶೆಟ್ಟಿ, ಮಕ್ಕಳಾದ ದರ್ಶನ್ ಶೆಟ್ಟಿ ಆಸ್ಟ್ರೇಲಿಯಾ, ಡಾ.ಶರಣ್ ಶೆಟ್ಟಿ ಮಂಗಳೂರು, ಸೊಸೆಯಂದಿರಾದ ಪರಿಣಿತ ಶೆಟ್ಟಿ, ಡಾ.ನಿಖಿತಾ ಪತಾರೆ ಮಂಗಳೂರು, ಮೊಮ್ಮಕ್ಕಳಾದ ಮೈರಾ ಶೆಟ್ಟಿ, ವಿಹಾ ಶೆಟ್ಟಿ, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.