ಪುತ್ತೂರು: ಇರ್ದೆ-ಬೆಟ್ಟಂಪಾಡಿ ಗ್ರಾಮೀಣ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ನವೀನ್ ರೈ ಚೆಲ್ಯಡ್ಕ ಪುನರಾಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಫಾರೂಕ್ ಟಿ.ಎಂ ಆಯ್ಕೆಯಾಗಿದ್ದಾರೆ.
ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಾದವ ಪೂಜಾರಿಯವರ ನಿವಾಸ ರೆಂಜದಲ್ಲಿ ನಡೆದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರ ಸೂಚನೆಯಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಝೀಜ್ ತೋಟದಮುಲೆ, ವಿವಿಧ ಬೂತ್ ಸಮಿತಿಗೆ ಐತಪ್ಪ ಪೇರಲ್ತಡ್ಕ, ಸದಾಶಿವ ರೈ ಚೆಲ್ಯಡ್ಕ, ದಾಮೋದರ್ ಪಾಟಾಲಿ, ಅಬೂಬಕ್ಕರ್ ಕೊರೆಂಗಿಲ, ಯಾಕೂಬ್ ಕೂಟತ್ತಾನ ಇವರನ್ನು ಆಯ್ಕೆ ಮಾಡಲಾಯಿತು. ಆಲಿ ಕುಂಞಿ ಕೊರೆಂಗಿಲ, ಮೊಯಿದು ಕುಂಞಿ ಕೋನಡ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಸಂಘಟನಾ ಕಾರ್ಯದರ್ಶಿ ಸಂತೋಷ ಭಂಡಾರಿ ಚಿಲ್ಮೆತ್ತಾರು, ವಿಶ್ವಜಿತ್, ಹಮಿದ್ ಕೊಮ್ಮಮಾರ್, ಪುತ್ತು ಚೆಲ್ಯಡ್ಕ, ಅಚ್ಚುತ ಉಪ್ಪಳಿಗೆ, ಭವಾನಿ ಹುಕ್ರಪ್ಪ ಗೌಡ ಪಂಜೊಟ್ಟು, ಅವಿನಾಶ್ ಟೆಲಿಸ್, ನಳಿನಿ ದೂಮಡ್ಕ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು
Home ಇತ್ತೀಚಿನ ಸುದ್ದಿಗಳು ಇರ್ದೆ-ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಆಯ್ಕೆ – ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಕಾರ್ಯದರ್ಶಿ ಫಾರೂಕ್ ಟಿ.ಎಂ