ಉಪ್ಪಿನಂಗಡಿ: ಕಂಕನಾಡಿ ನಿವಾಸಿ, 34 ನೆಕ್ಕಿಲಾಡಿಯ ಎಂ.ಎಸ್. ರಫೀಕ್ ಅವರ ಮಗಳ ಗಂಡ ಮುನಾವ್ವರ್ (33) ಹೃದಯಾಘಾತದಿಂದ ಮಸ್ಕತ್ನಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ.
ಮೃತರು ಮಸ್ಕತ್ನಲ್ಲಿ ಉದ್ಯೋಗದಲ್ಲಿದ್ದು, ಕುಟುಂಬ ಸಮೇತರಾಗಿ ಅಲ್ಲಿಯೇ ನೆಲೆಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಂದು ಗಂಡು ಮಗುವನ್ನು ಅಗಲಿದ್ದಾರೆ.