ಬಡಗನ್ನೂರು: ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಪಡುವನ್ನೂರು ಬಡಗನ್ನೂರು ಇದರ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಸಭೆ ಫೆ. 28 ರಂದು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ದಾರಿ ದೀಪ, ಒಣ ಕಸ ಸಾಗಿಸುವುದು, ರಸ್ತೆ ಸೂಚನಾ ಫಲಕ ಅಳವಡಿಕೆ,ಸುತ್ತ ಮುತ್ತಲಿನ ಪ್ರದೇಶದ ಸ್ವಚ್ಛತೆ, ಫಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಅನುದಾನ ಒದಗಿಸುವುದು, ಸಾಂಕ್ರಾಮಿಕ ರೋಗ ಶಿಬಿರಗಳಿಗೆ ಅನುದಾನ , ಬಯಲು ವಿಸರ್ಜನೆ ಮುಕ್ತ ಸರ್ಟಿಫಿಕೇಟ್ ನೀಡುವ ಬಗ್ಗೆ ಚರ್ಚಿಸಲಾಯಿತು. ಅಭಿವೃದ್ಧಿ ಅಧಿಕಾರಿ ಬಿ.ಸಿ ಸುಬ್ಬಯ್ಯ ಬೇಡಿಕೆಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್ ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಅಳ್ವ, ಗಿರಿಮನೆ, ಕುಮಾರ ಅಂಬಟೆಮೂಲೆ, ಧರ್ಮೇಂದ್ರ ಕುಲಾಲ್ ಪದಡ್ಕ, ಹೇಮಾವತಿ ಮೋಡಿಕೆ, ಸವಿತಾ ನೆರೋತ್ತಡ್ಕ, ಶ್ರೀಮತಿ ಕನ್ನಡ್ಕ, ಕಲಾವತಿ ಪಟ್ಲಡ್ಕ ಹಾಗೂ ಬಡಗನ್ನೂರು ಸಮುದಾಯ ಆರೋಗ್ಯಾಧಿಕಾರಿ ಪ್ರಜ್ಞಾ, ಪಡುವನ್ನೂರು ಸಮುದಾಯ ಆರೋಗ್ಯಾಧಿಕಾರಿ ದಿವ್ಯಶ್ರೀ, ಕಿರಿಯ ಆರೋಗ್ಯ ಸುರಕ್ಷಾಧಿಕಾರಿರಾದ ವನಿತಾ,ನಂದಿನಿ, ಹಾಗೂ ಅಶಾ ಕಾರ್ಯರಾದ ಪುಷ್ಪಾವತಿ, ಇಂದಿರಾ, ಸುಗಂಧಿ ವಿಜಯಲಕ್ಷ್ಮೀ, ಸುಜಾತ, ಜಾನಕಿ ಉಪಸ್ಥಿತರಿದ್ದರು.
ಬಡಗನ್ನೂರು ಕಿರಿಯ ಅರೋಗ್ಯ ಸುರಕ್ಷಾಧಿಕಾರಿ ನಂದಿನಿ ಸ್ವಾಗತಿಸಿ, ವಂದಿಸಿದರು.