ಪುತ್ತೂರು: ವ್ಯಕ್ತಿತ್ವ ವಿಕಸನ ಮತ್ತು ತರಬೇತಿಯ ಅಂತರಾಷ್ಟ್ರೀಯ ಸಂಸ್ಥೆಯಾದ JCI ಪುತ್ತೂರು ಘಟಕದ ಫೆಬ್ರವರಿ ತಿಂಗಳ ಸಾಮಾನ್ಯ ಸಭೆಯು ರೋಟರಿ ಮನೀಷಾ ಸಭಾಂಗಣದಲ್ಲಿ ಫೆ.27 ರಂದು JCI ಪುತ್ತೂರಿನ ಅಧ್ಯಕ್ಷ JC ಭಾಗ್ಯೇಶ್ ರೈ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ರವರು ‘ಅಡಿಕೆಗೆ ಪರ್ಯಾಯ ಬೆಳೆಗಳು ಮತ್ತು ನೀರಾವರಿ ನಿರ್ವಹಣೆ’ ವಿಷಯದಲ್ಲಿ JC ಸದಸ್ಯರಿಗೆ ಮಾಹಿತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರಸ್ತುತ ದಕ್ಷಿಣ ಕನ್ನಡ ಸೇರಿದಂತೆ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಹವಮಾನ ಬದಲಾವಣೆಯಿಂದಾಗಿ ಉಂಟಾಗುತ್ತಿರುವ ನೀರಾವರಿ ಸಮಸ್ಯೆಗಳ ಬಗ್ಗೆ ಹಾಗೂ ಅಡಿಕೆಗೆ ಪರ್ಯಾಯವಾಗಿ ಅಥವಾ ಜೊತೆಗೆ ಬೆಳೆಯಲು ಸಾಧ್ಯವಿರುವ ಕಾಳುಮೆಣಸು ಇತ್ಯಾದಿ ಬೆಳೆಗಳ ಬಗ್ಗೆ, ಲಭ್ಯವಿದ್ದ ಜಲಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಕೃಷಿಗೆ ಬಳಸಿಕೊಂಡ ಬಗ್ಗೆ ಸಂವಾದ ನಡೆಸಿದರು. JCI ಪುತ್ತೂರು ವತಿಯಿಂದ ಸುರೇಶ್ ಬಲ್ನಾಡು ರವರನ್ನು ಗೌರವಿಸಲಾಯಿತು.

ಸನ್ಮಾನ:-
JCI ಪೂರ್ವ ಅಧ್ಯಕ್ಷ , ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ JC ಕೇಶವ ಪ್ರಸಾದ್ ಮುಳಿಯ ರನ್ನು ‘ಬ್ರಹ್ಮತೇಜ’ ಪ್ರಶಸ್ತಿ ದೊರಕಿದ್ದಕ್ಕಾಗಿ JCI ಪುತ್ತೂರು ವತಿಯಿಂದ ಸನ್ಮಾನಿಸಲಾಯಿತು. ಕೇಶವ್ ಪ್ರಸಾದ್ ಮುಳಿಯ ರವರು ದೇಶದಲ್ಲಿ ಪ್ರಥಮ ಬಾರಿಗೆ ಧಾರ್ಮಿಕ ಪಠ್ಯಕ್ರಮ ಮಾಡಿ ಪುಸ್ತಕ ಮುದ್ರಿಸಿ, ಮಕ್ಕಳಿಗೆ ಹಿಂದೂ ಧಾರ್ಮಿಕ ಶಿಕ್ಷಣ ಪ್ರಾರಂಭಿಸಿ 24 ಕೇಂದ್ರಗಳಲ್ಲಿ ಸುಮಾರು 2000 ಮಕ್ಕಳಿಗೆ ಜ್ಞಾನರ್ಜನೆಗೆ ದಾರಿದೀಪವಾಗಿರುವುದಕ್ಕೆ ಬ್ರಹ್ಮ ತೇಜ ಪ್ರಶಸ್ತಿಯು ಲಭಿಸಿದೆ.ಈ ತಿಂಗಳು JCI ಪುತ್ತೂರು ಖಾಸಗಿ ಭದ್ರತಾ ಸಿಬ್ಬಂದಿಗಳಾದ ರಾಮಣ್ಣ ರೈ ಮತ್ತು ಅಬ್ದುಲ್ ಖಾದರ್ ಅವರನ್ನು ಸನ್ಮಾನಿಸಿತು.
ಕಾರ್ಯಕ್ರಮದಲ್ಲಿ JCI ಪುತ್ತೂರಿನ ಕಾರ್ಯದರ್ಶಿ, JC ಮನೋಹರ್ ಪಾಟಳಿ ರವರು ಘಟಕದ ವರದಿಯನ್ನು ವಾಚಿಸಿದರು. ವಲಯ ಉಪಾಧ್ಯಕ್ಷರಾದ JC ಸುಹಾಸ್ ಮರಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ JC ಮೋಹನ್ ಕೆ , ಲೇಡಿ JC ಕೋ ಆರ್ಡಿನೇಟರ್ JC ಆಶಾ ಮುತ್ಲಾಜೆ, JJC ಚೇರ್ ಪರ್ಸನ್ ಸ್ವಸ್ತಿ ಶೆಟ್ಟಿ, JC ಘಟಕ ಆಡಳಿತ ಮಂಡಳಿಯ ಸದಸ್ಯರು, ಪೂರ್ವ ಅಧ್ಯಕ್ಷರು, ಸರ್ವ ಸದಸ್ಯರು ಭಾಗವಹಿಸಿದ್ದರು.