ಜನಪ್ರಿಯ ಸೆಂಟ್ರಲ್ ಶಾಲಾ ಮಕ್ಕಳ “ಕಿಂಡರ್ ಗಾರ್ಡನ್ ಗ್ರಾಜುಯೇಷನ್ ಡೇ”

0

ಮೊಬೈಲ್ ನಿಂದ ಮಕ್ಕಳಿಗೆ ಮಾನಸಿಕವಾಗಿ ಮಾತ್ರವಲ್ಲದೆ ಆರೋಗ್ಯದಲ್ಲೂ ಸಮಸ್ಯೆಯಾಗಬಹುದು: ಡಾ. ಅನೂಪ್ ಇತಿಹಾಸ್

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿಗಳಿಗೆ ಕಿಂಡರ್ ಗಾರ್ಡನ್ ಗ್ರಾಜುಯೇಷನ್ ಡೇ ಕಾರ್ಯಕ್ರಮ ನಡೆಯಿತು.
ಎರಡು ವರ್ಷಗಳ ಪೂರ್ವ ಪ್ರಾಥಮಿಕ ಹಂತ ಪೂರ್ಣಗೊಳಿಸಿ 2025-26 ನೇ ಶೈಕ್ಷಣಿಕ ವರ್ಷದಿಂದ 1 ನೇ ತರಗತಿಗೆ ಕಾಲಿಡುತ್ತಿರುವ ಯು.ಕೆ.ಜಿ. ಮಕ್ಕಳಿಗೆ ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ಅಭಿನಂದಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಿಶ್ವ ವಿದ್ಯಾಲಯಗಳಲ್ಲಿ ನಡೆಸುವ ಘಟಿಕೋತ್ಸವ ಮಾದರಿಯಲ್ಲಿ ಮಕ್ಕಳಿಗೆ ಪದವಿ ಪ್ರಧಾನದ ಮೇಲಂಗಿ ಮತ್ತು ಟೋಪಿ ಧರಿಸಲಾಗಿತ್ತು ಹಾಗೆಯೇ ಪೂರ್ವ ಪ್ರಾಥಮಿಕ ಹಂತ ಪೂರ್ಣಗೊಳಿಸಿದ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್.ಕೆ.ಜಿ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಜನಪ್ರಿಯ ಹಾಸ್ಪಿಟಲ್ ಮಂಗಳೂರು ಇಲ್ಲಿನ ಮಕ್ಕಳ ತಜ್ಞ ಡಾ. ಅನೂಪ್ ಇತಿಹಾಸ್ ರವರು ಮಾತನಾಡಿ ಮಕ್ಕಳು ಮೊಬೈಲ್ ಬಳಸುವುದರಿಂದ ಮಾನಸಿಕವಾಗಿ ಮಾತ್ರವಲ್ಲದೇ ಆರೋಗ್ಯದಲ್ಲೂ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಪೋಷಕರು ಅತ್ಯಂತ ಜಾಗರೂಕರಾಗಿರಬೇಕು. ಕಿಂಡರ್ ಗಾರ್ಡನ್ ಗ್ರಾಜುಯೇಷನ್ ಪ್ರಮಾಣ ಪತ್ರ ಸ್ವೀಕರಿಸಿದ ಜನಪ್ರಿಯ ಶಾಲೆಯ ಮಕ್ಕಳು ಮುಂದೆ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಉನ್ನತ ಪದವಿಯನ್ನು ಪಡೆಯುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಫಾತಿಮ ನಸ್ರೀನ್ ಬಶೀರ್ ರವರು ವಹಿಸಿದ್ದರು . ನಿರ್ದೇಶಕರಾದ ನೌಶೀನ್ ಬದ್ರಿಯಾ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಪದವಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.
ಶಾಲಾ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್ ಮತ್ತು ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ಸಂಧರ್ಬೋಚಿತವಾಗಿ ಮಾತನಾಡಿದರು.
ಎಲ್. ಕೆ.ಜಿ. ಮಕ್ಕಳೇ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here