12 ಸ್ಥಾನಗಳಿಗೆ 17 ಮಂದಿ ಕಣದಲ್ಲಿ -3 ಸ್ಥಾನಗಳಿಗೆ ಅವಿರೋಧ ಆಯ್ಕೆ, 6 ಮಂದಿ ಚುನಾವಣಾ ಕಣದಿಂದ ಹೊರಬಂದಿದ್ದಾರೆ
ಪುತ್ತೂರು: ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗೆ ಚುನಾವಣೆಯು ಮಾ.2ರಂದು ಆದಿತ್ಯವಾರ ಬೆ.10 ರಿಂದ ಅಪರಾಹ್ನ 4 ರವರೆಗೆ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.
ಒಟ್ಟು 15 ಸ್ಥಾನಗಳಿದ್ದು ಪರಿಶಿಷ್ಠ ಪಂಗಡ ಮೀಸಲು ಸ್ಥಾನಕ್ಕೆ ದಿನೇಶ್ ಕುಮಾರ್,ಹಿಂದುಳಿದ ವರ್ಗ ಎ ಮೀಸಲು ಸ್ಥಾನಕ್ಕೆ ಉಮೇಶ್ ಪೂಜಾರಿ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಕೆ.ಕವನ್ ನಾೖಕ್ ಅವಿರೋಧ ಆಯ್ಕೆಯಾಗಿದ್ದಾರೆ. ಪರಿಶಿಷ್ಠ ಜಾತಿ ಮೀಸಲು ಸ್ಥಾನಕ್ಕೆ ಆರ್ಹ ಅಭ್ಯರ್ಥಿ ಇಲ್ಲದ ಕಾರಣ ಸ್ಥಾನ ಖಾಲಿ ಉಳಿದಿರುತ್ತದೆ. ಉಳಿದಂತೆ 9 ಸಾಮಾನ್ಯ ಸ್ಥಾನಗಳಿಗೆ ಮತ್ತು 2 ಮಹಿಳಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸಾಮಾನ್ಯ ಸ್ಥಾನಕ್ಕೆ 13 ,ಮಹಿಳಾ ಸ್ಥಾನಕ್ಕೆ 4 ಜನ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಸಾಮಾನ್ಯ ಸ್ಥಾನದಿಂದ ಕೊಡಂಗೆ ಬಾಲಕೃಷ್ಣ ನಾೖಕ್, ನಿತಿನ್ ಚಂದ್ರ ನಾೖಕ್, ಪುಷ್ಪರಾಜ್ ನಾೖಕ್,ರಘುನಾಥ ನಾೖಕ್, ಕೆ.ರತ್ನಾಕರ ನಾೖಕ್, ರಾಕೇಶ್ ಕುಮಾರ್, ವಿಜಯ ಕುಮಾರ್, ಶಿವ ಪ್ರಸಾದ್ ಎ., ಸದಾಶಿವ ನಾೖಕ್, ಸುಜಿತ್ ಕುಮಾರ್ ಕೆ.,ಸುಧಾಕರ್ ನಾೖಕ್ ಕೆ.ಜಿ., ಸಂತೋಷ್ ಕುಮಾರ್ ಎ., ಹರೀಶ್ ನಾೖಕ್ , ಮಹಿಳಾ ಮೀಸಲು ಸ್ಥಾನದಿಂದ ನಳಿನಾಕ್ಷಿ ಎಚ್.ನಾೖಕ್, ಪುಷ್ಪಲತಾ ಕೆ.ವಿ, ವನಿತಾ ನಾೖಕ್ , ಹೇಮಲತಾ ನಾೖಕ್ ಸ್ಪರ್ಧಿಸುತಿದ್ದಾರೆ ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರ ಕಛೇರಿ ಮಂಗಳೂರು ಇದರ ಪ್ರಥಮ ದರ್ಜೆ ಸಹಾಯಕರಾದ ನವೀನ್ ಕುಮಾರ್ ಎಂ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣಾ ಕಣದಿಂದ ಹೊರಬಂದವರು:
ಕೊಡಂಗೆ ಬಾಲಕೃಷ್ಣ ನಾೖಕ್, ಶಿವಪ್ರಸಾದ್ ಎ. ಪುಷ್ಪರಾಜ್ ನಾೖಕ್, ವಿಜಯಕುಮಾರ್, ಪುಷ್ಪಲತಾ ಕೆ.ವಿ. ನಳಿನಾಕ್ಷಿ ಎಚ್.ನಾೖಕ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
