ಪ್ರಾಮಾಣಿಕ ವ್ಯವಹಾರದಿಂದ ಉದ್ಯಮ ಯಶಸ್ಸು-ಸಾದಿಕ್ ಅಲಿ ತಂಙಳ್
ಪುತ್ತೂರು: ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿರುವ ಬಿ.ಎ ಕಾಂಪ್ಲೆಕ್ಸ್‌ನಲ್ಲಿ ‘ಟಿ.ಎಸ್ ಮಿನಿ ಸೂಪರ್ ಮಾರ್ಕೆಟ್’ ಫೆ.27ರಂದು ಶುಭಾರಂಭಗೊಂಡಿತು.
ಸಯ್ಯದ್ ಜಾಫರ್ ಸಾದಿಕ್ ಅಲಿ ತಂಙಳ್ ಕುಂಬೋಳ್ ಅವರು ಸೂಪರ್ ಮಾರ್ಕೆಟ್‌ನ್ನು ಉದ್ಘಾಟಿಸಿ ದುವಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಉತ್ತಮ ಗುಣಮಟ್ಟದ ಮತ್ತು ಪ್ರಾಮಾಣಿಕ ವ್ಯವಹಾರದಿಂದ ಉದ್ಯಮ ಯಶಸ್ಸು ಗಳಿಸುತ್ತದೆ, ಸಣ್ಣ ಲಾಭಾಂಶವಿಟ್ಟು ವ್ಯಾಪಾರ ಮಾಡುವ ಮೂಲಕ ಟಿ.ಎಸ್ ಮಿನಿ ಸೂಪರ್ ಮಾರ್ಕೆಟ್ ಗ್ರಾಹಕ ಸ್ನೇಹಿ ಸೂಪರ್ ಮಾರ್ಕೆಟ್ ಆಗಿ ಹೆಸರು ಪಡೆಯಲಿ ಎಂದು ಆಶಿಸಿದರು.
ಅತಿಥಿಗಳಾಗಿ ಸಯ್ಯದ್ ಹಾಶಿಮ್ ಬಾಅಲವಿ ತಂಙಳ್ ಕೊರಿಂಗಿಲ ಅತಿಥಿಗಳಾಗಿ, ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಸುರೇಶ್ ಸರಳೀಕಾನ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಟಿ.ಎಸ್ ಟೂರ‍್ಸ್ ಟ್ರಾವೆಲ್ಸ್‌ನ ಚೀಫ್ ಅಮೀರ್ ಲತೀಫ್ ಜೌಹರಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್, ನೂರ್ ಮಹಮ್ಮದ್ ನೀರ್ಕಜೆ, ಶಂಸುದ್ದೀನ್ ದಾರಿಮಿ, ಗ್ರೆಟ್ಟಾ ಡಿಸೋಜಾ, ಅಬ್ದುಲ್ಲ ಕುಂಞಿ ಬಾಳುಮೂಲೆ, ರಾಮಕೃಷ್ಣ ಭಟ್ ಸಿ.ಎಚ್ ಕೊಯಿಲ, ಶ್ರೀನಿವಾಸ ಭಟ್ ಚಂದುಕೂಡ್ಲು, ಅಯ್ಯೂಬ್ ವಹಬಿ ಕೊರಿಂಗಿಲ, ಮನ್ಸೂರ್ ಅದಾನಿ ಮುಈನಿ ಪಾಲಡ್ಕ, ಅಝ್ಮಿಯಾ ಫಾಝಿಲ್ ಹನೀಫಿ, ಆಲಿಕುಂಞಿ ಹಾಜಿ ಕೊರಿಂಗಿಲ, ಸವಾದ್ ಪಟ್ಟೆಕ್ಕಾರ‍್ಸ್, ಹಮೀದ್ ಕೊಮ್ಮೆಮ್ಮಾರ್, ಫಕ್ರುದ್ದೀನ್ ಹಾಜಿ ಕೊಯಿಲ, ಪ್ರಕಾಶ್ ರೈ ಬೈಲಾಡಿ, ರಾಮಯ್ಯ ರೈ, ಮುರಳಿ ಪಾಟಾಳಿ, ರಘುರಾಮ್ ಪಾಟಾಳಿ, ಹಮೀದ್ ಕೊಯಿಲ, ಅಬ್ಬಾಸ್ ಹಾಜಿ ಮಣ್ಣಾಪು, ಶರೀಫ್ ರೋಯಲ್, ಅಶ್ರಫ್ ಪಟ್ಟೆ, ಅಲಿ ಹಾಜಿ ತಂಬುತ್ತಡ್ಕ, ಆಸಿಫ್ ಹಾಜಿ ತಂಬುತ್ತಡ್ಕ, ಯಾಕೂಬ್ ಕೂಟತ್ತಾನ, ರಫೀಕ್ ಎನ್‌ಆರ್‌ಕೆ, ಆದಂ ಹಾಜಿ ಪಡುಮಲೆ, ಆದಂ ಹಾಜಿ ಮುಂಡೋಳೆ, ಮಹಮ್ಮದ್ ಪುತ್ತು ಗುಂಡ್ಯಡ್ಕ, ಸಿ.ಎಂ ಹಂಝ ಹಾಜಿ ಮತ್ತಿತರು ಹಲವರು ಉಪಸ್ಥಿತರಿದ್ದರು.
ಪಾಲುದಾರ ತ್ವಾಹಾ ಪಮ್ಮಲೆ ಅವರ ತಾಯಿ ಆಯಿಶಾ ಪ್ರಥಮ ಖರೀದಿ ಮಾಡಿದರು. ನಂತರ ಪಾಲುದಾರ ಜುನೈದ್ ಗುಂಡ್ಯಡ್ಕ ಅವರ ತಾಯಿ ಮರಿಯಮ್ಮ ಹಾಗೂ ಮೈಮೂನ ಡೆಂಬಾಳೆ ಖರೀದಿ ಮಾಡಿದರು.
ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದ ಟಿ.ಎಸ್ ಮಿನಿ ಸೂಪರ್ ಮಾರ್ಕೆಟ್‌ನ ಪಾಲುದಾರ ಜುನೈದ್ ಗುಂಡ್ಯಡ್ಕ ಹಾಗೂ ತ್ವಾಹಾ ಪಮ್ಮಲೆ ಮಾತನಾಡಿ, ನಮ್ಮಲ್ಲಿ ದಿನಸಿ ಸಾಮಾಗ್ರಿಗಳು, ಪ್ಲಾಸ್ಟಿಕ್ ಐಟಂಗಳು, ಐಸ್‌ಕ್ರೀಂ, ವೆಜಿಟೇಬಲ್ಸ್, ಫ್ರುಟ್ಸ್ ಹಾಗೂ ಇನ್ನಿತರ ಐಟಂಗಳು ಲಭ್ಯವಿದ್ದು, ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ಪಾರ್ಕಿಂಗ್ ವ್ಯವಸ್ಥೆಯಿದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.