ನಿಡ್ಪಳ್ಳಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು, ಇರ್ದೆ-ಬೆಟ್ಟಂಪಾಡಿ, ಪಾಣಾಜೆ, ನಿಡ್ಡಳ್ಳಿ ಘಟಕ ಇದರ ಆಶ್ರಯದಲ್ಲಿ ಆಂಬ್ಯುಲೆನ್ಸ್ ಸೇವೆಯ 2ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಸಾಮಾನ್ಯ ತಪಾಸಣೆ, ದಂತ ಹಾಗೂ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗೂ ಅಟಲ್ಜೀ ಜನ್ಮಶತಾಬ್ದಿ ಪ್ರಯುಕ್ತ ಭಾ.ಜ.ಪಾ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭ ಮಾ.9 ರಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.ತಾಲೂಕು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ವಳಾಲು, ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ತಾಲೂಕು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ, ರೆಂಜ ಶ್ರೀ ದೇವಿ ಕ್ಲಿನಿಕ್ ನ ಡಾ.ಸತೀಶ್ ಕುಮಾರ್ ಬಿ, ನಿಡ್ಪಳ್ಳಿ ಬಿ.ಜೆ.ಪಿ ಶಕ್ತಿ ಕೇಂದ್ರದ ಸಂಚಾಲಕ ಸಂತೋಷ ಕುಮಾರ್ ಬಿ, ಪಾಣಾಜೆ ಬಿ.ಜೆ.ಪಿ ಶಕ್ತಿ ಕೇಂದ್ರದ ಸಂಚಾಲಕ ಪ್ರೆಮ್ ರಾಜ್ ಆರ್ಲಪದವು, ಇರ್ದೆ ಬಿ.ಜೆ.ಪಿ ಶಕ್ತಿ ಕೇಂದ್ರದ ಸಂಚಾಲಕ ಪುರಂದರ.ಡಿ, ಗ್ರಾಮಾಂತರ ಮಂಡಲ ಬಿ.ಜೆ.ಪಿ ಎಸ್.ಸಿ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಸುಜಿತ್ ಕಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಟ್ಟಂಪಾಡಿ ಬಿ.ಜೆ.ಪಿ ಶಕ್ತಿ ಕೇಂದ್ರದ ಸಂಚಾಲಕ ಸಂದೀಪ್ ರೈ ಬೆಟ್ಟಂಪಾಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ನಿಡ್ಪಳ್ಳಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಕುಮಾರ ನರಸಿಂಹ ಭಟ್ ಸ್ವಾಗತಿಸಿದರು. ಯತೀಶ್ ಕೋರ್ಮಂಡ ವಂದಿಸಿದರು.ಸುಮಾರು 364 ಮಂದಿ ಫಲಾನುಭವಿಗಳು ವಿವಿಧ ಈ ಶಿಬಿರದ ಸದುಪಯೋಗ ಪಡೆದುಕೊಂಡರು.
ಬಿ.ಜೆ.ಪಿ ಪಕ್ಷದ ಹಿರಿಯ ಕಾರ್ಯಕರ್ತರಾದ ನಾರಾಯಣ ಭಟ್ ಕಾಕೆಕೊಚ್ಚಿ, ಬಿ. ವೆಂಕಟರಾವ್ ಬೆಟ್ಟಂಪಾಡಿ, ಕೆ ಸಂಜೀವ ಶೆಟ್ಟಿ ಕೊಮ್ಮಂಡ, ಸೋಮಪ್ಪ ನಾಯ್ಕ ಭಾಜಗುಳಿ, ಸುಬ್ಬಣ್ಣ ಗೌಡ ಪಾರ, ಪರಮೇಶ್ವರ ನಾಯ್ಕ,ಶ್ರೀನಿವಾಸ ಭಟ್ ವಾಲ್ತಾಜೆ,ಗುರುವ ಗೋಲಿಪದವು ಇವರನ್ನು ಸನ್ಮಾನಿಸಲಾಯಿತು. ಅಪದ್ಭಾಂಧವರಾಗಿ ಆಂಬ್ಯುಲೆನ್ಸ್ ಚಾಲಕರಾಗಿ ಸೇವೆ ನೀಡುತ್ತಿರುವ ಮೋಹನ್ ಭರಣ್ಯ, ಪ್ರೇಮರಾಜ್ ಅರ್ಲಪದವು , ರಕ್ಷನ್ ಕುಲಾಲ್ ಬೇಂಗತಡ್ಕ, ಸುಖಿನ್ ರಾಜ್, ಸುಜಿತ್ ಕಜೆ ಬೆಟ್ಟಂಪಾಡಿ, ಚರಣ್ ಕಕ್ಕೂರು, ಜಗದೀಶ್ ಆರ್ಲಪದವು ಇವರನ್ನು ಸನ್ಮಾನಿಸಲಾಯಿತು.