ವಿಟ್ಲ: ಹಣಕಾಸಿನ ವಿಚಾರ – ವ್ಯಕ್ತಿಗೆ ಹಲ್ಲೆ ಆರೋಪ

0

ವಿಟ್ಲ : ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಸೀದಿ ಆವರಣದಲ್ಲೇ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಟ್ರಸ್ಟ್ ಸದಸ್ಯ ಗಫೂ‌ರ್ ವಿಟ್ಲ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾನು ಸಾಯಂಕಾಲ ಮೇಗಿನಪೇಟೆ ಮಸೀದಿ ಬಳಿ ನಿಂತಿದ್ದಾಗ ಮಸೀದಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ಮತ್ತು ಮಹಮ್ಮದ್ ಹಂಜಾ ಎಚ್. ರವರು ಹಣಕಾಸಿನ ವಿಚಾರದಲ್ಲಿ ಪರಸ್ಪರ ಚರ್ಚೆ ಮಾಡುತ್ತಿರುವಾಗ ನಾನು ಉಪವಾಸ ಸಮಯದಲ್ಲಿ ಯಾಕೆ ಚರ್ಚೆ ಮಾಡುತ್ತೀರಿ ಅಗತ್ಯ ಇದ್ದರೆ ಮಸೀದಿಗೆ ನೋಟೀಸ್ ಕೊಡಿ ಎಂದು ಹೇಳಿದಾಗ ಮಸೀದಿ ಅಧ್ಯಕ್ಷರು ಅದನ್ನು ಕೇಳಲು ನೀನು ಯಾರು ಎಂದು ಹೇಳಿ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಗಫೂರ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here