ಪಾಣಾಜೆ: ಇಲ್ಲಿನ ಪುಳಿತ್ತಡಿ ಶಟ್ಲ್ ಬ್ಯಾಡ್ಮಿಂಟನ್ ಟೀಮ್ ಆಶ್ರಯದಲ್ಲಿ ಹೊನಲು ಬೆಳಕಿನ ಪುರುಷರ ಮುಕ್ತ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ ಮಾ.15 ರಂದು ಆರ್ಲಪದವು ಶ್ರೀ ಪೂಮಾಣಿ, ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.
ಪ್ರಥಮ ಬಹುಮಾನವಾಗಿ ರೂ. 5025 ಮತ್ತು ಟ್ರೋಫಿ, ದ್ವಿತೀಯ ರೂ. 3025 ಮತ್ತು ಟ್ರೋಫಿ, ತೃತೀಯ ಹಾಗೂ ಚತುರ್ಥ ತಲಾ ರೂ. 1025 ಬಹುಮಾನ ಹಾಗೂ ವೈಯುಕ್ತಿಕ ಬಹುಮಾನ ಇರಲಿದೆ. ಭಾಗವಹಿಸುವ ತಂಡಗಳು ಮುಂಚಿತವಾಗಿ ನೋಂದಾಯಿಸಲು 78999 71317 ಅಥವಾ 9353876819 ಸಂಪರ್ಕಿಸುವಂತೆ ಆಯೋಜಕರ ಪ್ರಕಟಣೆ ತಿಳಿಸಿದೆ.