ಪುತ್ತೂರು: ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ತಯಾರಿ ಹಾಗೂ ಆತ್ಮವಿಶ್ವಾಸ ವೃದ್ಧಿಸಲು ವಿಶೇಷ ಕಾರ್ಯಕ್ರಮ ನಡೆಯಿತು.
ಕೆ.ಪಿ.ಸಿ.ಸಿ. ಲೇಬರ್ ಶೆಲ್ ರಾಜ್ಯ ಕಾರ್ಯದರ್ಶಿ ಪಿ ಶಾಬು ಸಾಹೇಬ್ ಪಾಲ್ತಾಡು ಇವರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸುಬ್ಬಪ್ಪ ಕೈಕಂಬ ಅವರು ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಸಿದ್ಧತೆ ಮಾಡಬೇಕು ಆತ್ಮವಿಶ್ವಾಸ ಹೇಗೆ ಬೆಳೆಸಿಕೊಳ್ಳ ಬೇಕು, ದಿನಚರಿ ಹೇಗಿರಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅತ್ಯುತ್ತಮ ರೀತಿಯಲ್ಲಿ ಉದಾಹರಣೆ ಸಹಿತ ತಮ್ಮೆಲ್ಲ ಅನುಭವವನ್ನು ವಿವರಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಮಾರ್ಗದರ್ಶನ ನೀಡಿದರು.
ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ಶಾಬು ಸಾಹೇಬ್ ಪಾಲ್ತಾಡು, ಮುಖ್ಯ ಶಿಕ್ಷಕಿ ನಳಿನಿ ಕೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಕರುಣಾಕರ ಮಣಿಯಾಣಿ ನಿರೂಪಿಸಿದರು. ನಳಿನಿ ಕೆ ಅವರು ವಂದಿಸಿದರು. ಶಿಕ್ಷಕರು ಸಹಕರಿಸಿದರು.