ಪುತ್ತೂರು: ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಪುತ್ತೂರಿಗರಿಗೆ ಮಳೆರಾಯನ ಆಗಮನ ಖುಷಿ ನೀಡಿದೆ. ಕರಾವಳಿಯಲ್ಲಿ ಏಕಾಏಕಿ ಮಳೆಯ ಸಿಂಚನವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪನೆಯ ವಾತಾವರಣ ಸಿಕ್ಕಂತಾಗಿದೆ.
ಕಳೆದ ಕೆಲ ದಿನಗಳಿಂದ ಕರಾವಳಿಯಲ್ಲಿ ವಿಪರೀತ ಬಿಸಿಲಿನ ವಾತಾವರಣ ಜನರನ್ನು ಕಂಗೆಡಿಸಿತ್ತು. ಇಂದು ಸಂಜೆ ವೇಳೆ ದ.ಕ ಜಿಲ್ಲೆಯ ಹಲವೆಡೆ ಧಿಡೀರ್ ಆಗಿ ಮಳೆ ಸುರಿದಿದ್ದು, ಇಳೆ ತಂಪಾಗಿದ್ದು, ಬಿಸಿಲಿನ ಬೇಗೆಯಿಂದ ಕಂಗೆಟ್ಟ ಜನ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.