ಕಾವು: ನನ್ಯ ಶ್ರೀದಂಡನಾಯಕ ದೈವಗಳ ಪುನಃಪ್ರತಿಷ್ಠೆ-ಬ್ರಹ್ಮಕಲಶೋತ್ಸವ

0

ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಗ್ರಾಮ ದೈವಗಳ ಸಾನಿಧ್ಯ ಕೇಂದ್ರವಾಗಿರುವ, ನನ್ಯ ಮೂಡೆತ್ತಾಯ ಮನೆತನದವರ ಅನುವಂಶಿಕ ಆಡಳಿತದಲ್ಲಿರುವ ಕಾರಣಿಕದ ನೆಲೆ ಎಂದೇ ಪ್ರಸಿದ್ಧಿಯಾಗಿರುವ ನನ್ಯ ಚಾವಡಿಯು ಪುನರ್ ನಿರ್ಮಾಣಗೊಂಡು, ನನ್ಯ ದಂಡನಾಯಕ ದೈವಗಳ(ಉಳ್ಳಾಕ್ಲು) ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಮಾ.12ರಂದು ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಿತು.


ಜೀರ್ಣೋದ್ಧಾರಗೊಂಡು ಪುನರ್‌ನಿರ್ಮಾಣಗೊಂಡ ನನ್ಯಚಾವಡಿಯಲ್ಲಿ ನನ್ಯ ಶ್ರೀದಂಡನಾಯಕ ದೈವಗಳ(ಉಳ್ಳಾಕ್ಲು)ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವವು ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು.

ಮಾ. 11ರಂದು ಸಂಜೆ ಗಂಟೆ 7ರಿಂದ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ನಡೆಯಿತು. ಮಾ.12ರಂದು ಬೆಳಿಗ್ಗೆ ಗಂಟೆ 7ರಿಂದ ನನ್ಯ ಚಾವಡಿಯಲ್ಲಿ ಮತ್ತು ದರ್ಭೆತ್ತಡ್ಕ ಮಾಡದಲ್ಲಿ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು ಪೂರ್ವಾಹ್ನ ಗಂಟೆ 10-47ರ ವೃಷಭ ಲಗ್ನ ಸುಮುಹೂರ್ತದಲ್ಲಿ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ, ನನ್ಯದಲ್ಲಿ ನಾಗ ಪ್ರತಿಷ್ಠೆ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ನನ್ಯ ದಂಡನಾಯಕ ದೈವಸ್ಥಾನದ ಆಡಳಿತ ಮೊಕ್ತೇಸರ ನನ್ಯ ಅಚ್ಚುತ ಮೂಡೆತ್ತಾಯ, ನನ್ಯ ಮನೆತನದ ವಾಸುದೇವ ಮೂಡೆತ್ತಾಯ, ರಾಧಾಕೃಷ್ಣ ಮೂಡೆತ್ತಾಯ, ಶ್ರೀಪತಿ ಮೂಡೆತ್ತಾಯ, ವರುಣ್ ನನ್ಯ, ಶ್ರವಣ್ ನನ್ಯ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ, ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯ, ಅರಿಯಡ್ಕ ಗ್ರಾ.ಪಂ ಸದಸ್ಯ ಲೋಕೇಶ್ ಚಾಕೋಟೆ, ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ ರೈ ಮದ್ಲ, ಕಾವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಮಳಿ ರಾಮಚಂದ್ರ ಭಟ್, ಶರತ್ ಕುಮಾರ್ ರೈ, ಕೃಷ್ಣಪ್ರಸಾದ್ ಕೊಚ್ಚಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಹುಷ ಭಟ್ ಪಳನೀರು, ಕಾವು ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಗಂಗಾಧರ ಚಾಕೋಟೆ, ಶಿವಪ್ರಸಾದ್ ಕೊಚ್ಚಿ, ಬಾಲಕೃಷ್ಣ ಕೆದಿಲಾಯ ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here