ಪುತ್ತೂರು: ಪುತ್ತೂರು ಪಿಎಲ್ಡಿ ಬ್ಯಾಂಕ್ ನೂತನ ಕೋಶಾಧಿಕಾರಿಯಾಗಿ ಯುವರಾಜ್ ಪೆರಿಯತ್ತೋಡಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾ.12 ರಂದು ಜರಗಿದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕೋಶಾಧಿಕಾರಿ ಹುದ್ದೆಗೆ ಬ್ಯಾಂಕಿನ ನಿರ್ದೇಶಕ ಯುವರಾಜ್ ಪೆರಿಯತ್ತೋಡಿರವರ ಹೆಸರನ್ನು ಬ್ಯಾಂಕಿನ ನಿರ್ದೇಶಕ ಯತೀಂದ್ರ ಕೊಚ್ಚಿ ಸೂಚಿಸಿ, ಇನ್ನೋರ್ವ ನಿರ್ದೇಶಕ ಸುಂದರ ಪೂಜಾರಿ ಬಡಾವು ಅನುಮೋದಿಸಿದರು.
ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಇಚ್ಲಂಪಾಡಿರವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ್ ರೈ ಪಂಜೊಟ್ಟು, ನಿರ್ದೇಶಕರುಗಳಾದ ಸುಜಾತ ರಂಜನ್ ರೈ, ವಿಕ್ರಮ್ ರೈ ಸಾಂತ್ಯ, ಚಂದ್ರಾವತಿ ಅಭಿಕಾರ್, ಸ್ವಾತಿ ರೈ ಅರ್ತಿಲ, ಬಾಬು ಮುಗೇರ, ರಾಜುಮೋನು ಪಿ.ಉಳಿಪು, ಕುಶಾಲಪ್ಪ ಗೌಡ ಅನಿಲ, ನಾರಾಯಣ ನಾಯ್ಕ ಏಣಿತಡ್ಕ, ಚೆನ್ನಕೇಶವರವರುಗಳು ಉಪಸ್ಥಿತರಿದ್ದರು.
ಬ್ಯಾಂಕಿನ ವ್ಯವಸ್ಥಾಪಕ ಶೇಖರ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಯುವರಾಜ್ ಪೆರಿಯತ್ತೋಡಿ ಪರಿಚಯ
ಬ್ಯಾಂಕಿನ ನೂತನ ಕೋಶಾಧಿಕಾರಿಯಾಗಿ ಅಯ್ಕೆಯಾಗಿರುವ ಯುವರಾಜ್ ಪೆರಿಯತ್ತೋಡಿ ರವರು ಎರಡನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಇವರು ಬ್ಯಾಂಕಿನ ಸಾಲಗಾರರಲ್ಲದ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಇವರು ಪ್ರಸ್ತುತ ಬಿಜೆಪಿ ಪುತ್ತೂರು ನಗರ ಮಂಡಲ ಉಪಾಧ್ಯಕ್ಷರಾಗಿದ್ದಾರೆ, ಈ ಹಿಂದಿನ ಅವಧಿಯಲ್ಲಿ ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪೆರಿಯತ್ತೋಡಿ ಸಚಿನ್ ಯುವಕ ಮಂಡಲದ ಮಾಜಿ ಕಾರ್ಯದರ್ಶಿಯಾಗಿರುವ ಇವರು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯವಾಗಿ ದುಡಿಯುತ್ತಿದ್ದಾರೆ.