ಸರ್ವರ ಸಹಕಾರದೊಂದಿಗೆ ವರುಷದೊಳಗೆ ಬ್ರಹ್ಮಕಲಶೋತ್ಸವದ ಚಿಂತನೆ ಪತ್ರಿಕಾಗೋಷ್ಠೀಯಲ್ಲಿ ಮಾಧವ ಮಾವೆ
ವಿಟ್ಲ: ಸುಮಾರು ಹದಿನೆಂಟು ವರುಷಗಳ ಹಿಂದೆ ಬ್ರಹ್ಮಕಲಶ ನಡೆಸಲಾಗಿದ್ದ ಸಾಲೆತ್ತೂರು ಶಿವಗಿರಿ ಬೆಟ್ಟದ ಸದಾಶಿವ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಾಗಿದ್ದು, ಒಂದೂವರೆ ಕೋಟಿ ರೂ ಅಂದಾಜು ವೆಚ್ಚದಲ್ಲಿ ಪುನರುಜ್ಜೀವನಗೊಳಿಸಿ ಬ್ರಹ್ಮಕಲಶ ನಡೆಸಲು ಉದ್ದೇಶಿಸಲಾಗಿದೆ ಎಂದು ಉದ್ಯಮಿ ಮಾಧವ ಮಾವೆಯವರು ಹೇಳಿದರು.
ಅವರು ಸಾಲೆತ್ತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.ಈಗ ಇರುವ ನಮ್ಮ ದೇವಾಲಯವು ಶಿಲಾಮಯವಾಗಿದ್ದು, ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಊರಿನ ಎಲ್ಲರನ್ನೂ ಸೇರಿಸಿಕೊಂಡು ಜೀರ್ಣೋದ್ಧಾರ ಸಮಿತಿಯನ್ನು ಮಾಡಿಕೊಂಡು ಆ ಸಮಿತಿ ಹಾಗೂ ಆಡಳಿತ ಸೇವಾ ಟ್ರಸ್ಟ್ ಮುಖಾಂತರ ನಾವು ಇದನ್ನು ಜೀರ್ಣೋದ್ಧಾರ ಮಾಡಿ 365 ದಿವಸದ ಒಳಗಡೆ ಬ್ರಹ್ಮಕಲಶ ಮಾಡಬೇಕೆನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಈಗಾಗಲೇ ಕೆಲವೊಂದು ದಾನಿಗಳು ಕೆಲವೊಂದು ವಸ್ತುಗಳನ್ನು ನೀಡಲು ಮುಂದೆ ಬಂದಿದ್ದಾರೆ.
ಮುಂದಿನ ತಿಂಗಳು ನಡೆಯುವ ದೇವಸ್ಥಾನದ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಮರದ ಕೆತ್ತನೆ ಶಿಲ್ಪಿಗೆ ವೀಳ್ಯ ನೀಡಲಾಗುವುದು, ದೇವಸ್ಥಾನದಲ್ಲಿ ರಾಜಾಂಗಣ, ಪಾಕಶಾಲೆ, ಭೋಜನ ಶಾಲೆ, ಶೌಚಾಲಯ ನಿರ್ಮಿಸಲಾಗಿದೆ ಸುತ್ತು ಹೊರಾಂಗಣ ಅರ್ಧದಷ್ಟು ಆಗಿದೆ. ಆದರೆ ದೇವಸ್ಥಾನದ ಗರ್ಭಗುಡಿ,ನಮಸ್ಕಾರ ಮಂಟಪ, ಗಣಪತಿ ಗುಂಡಿಗಳನ್ನು ಶಿಲಾಮಯವಾಗಿ ಮಾಡಿದ್ದರೂ ಮಾಡು ಕಾಂಕ್ರೀಟ್ ಮಯವಾಗಿದೆ. ಪ್ರಶ್ನೆ ಚಿಂತನೆಯಲ್ಲಿ ಮೇಲ್ಚಾವಣಿಯನ್ನು ಮರದ ಮಾಡು ಮಾಡಿ ಹಂಚು ಹೊದಿಸಬೇಕು ಅಥವಾ ತಾಮ್ರದ ಹೊದಿಕೆ ಮಾಡಬೇಕು ಎಂದು ಕಂಡು ಬಂದಿದೆ. ಶಾಸ್ತಾರಕಟ್ಟೆ ಯನ್ನು ವ ಪುನರ್ ನಿರ್ಮಾಣ ಮಾಡಬೇಕಿದೆ. ಈಗ ವರ್ಧಂತ್ಯುತ್ಸವ ಮಾತ್ರ ನಡೆಯುತ್ತಿದೆ ಜಾತ್ರೆ ನಡೆಸುವ ಯೋಜನೆ ಇದೆ.ವಾಸ್ತು ತಜ್ಞ ರ ಪ್ರಕಾರ ಸುಮಾರು ಒಂದೂವರೆ ಕೋಟಿ ರೂ. ವೆಚ್ಚ ತಗಲಬಹುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಸಫಲ್ಯ, ಕೋಶಾಧಿಕಾರಿ ಮಂಜುನಾಥ ಅಗರಿ, ಕಾರ್ಯದರ್ಶಿ ದೇವಿದಾಸ ಶೆಟ್ಟಿ ಪಾಲ್ತಾಜೆ ಸದಾಶಿವ ಸೇವಾ ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಆನಂದ ರೈ ಪೇರ್ಲಬೈಲು,ರಂಗನಾಥ ರೈ ಬೆಳಿಯೂರುಗುತ್ತು, ಶ್ರೀನಿವಾಸ ಆಚಾರ್ಯ, ಕೃಷ್ಣ ಪ್ರಸಾದ ಪಾಲ್ತಾಜೆ ಮೊದಲಾದವರು ಉಪಸ್ಥಿತರಿದ್ದರು.