ಕೆಯ್ಯೂರು: ಗೇರು ತೋಪಿಗೆ ಬೆಂಕಿ 

0

ಪುತ್ತೂರು: ಕೆಸಿಡಿಸಿ ಗೆ ಸೇರಿದ ಕೆಯ್ಯೂರು ಗ್ರಾಮದ ಕೋಡಂಬು ಎಂಬಲ್ಲಿರುವ ಗೇರು ತೋಪಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಘಟನೆ ಮಾ.12ರಂದು ನಡೆದಿದೆ. ಸುಮಾರು 4 ಎಕರೆಯಷ್ಟು ವಿಸ್ತೀರ್ಣದ ಗೇರು ತೋಪಿಗೆ ಬೆಂಕಿ ಬಿದ್ದಿದ್ದು, ತಕ್ಷಣವೇ ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ನೇತೃತ್ವದಲ್ಲಿ ಬೆಂಕಿಯನ್ನು ನಂದಿಸಲಾಗಿದೆ ಎಂದು ತಿಳಿದು ಬಂದಿದೆ. 

ಬೆಂಕಿ ಬಿದ್ದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶರತ್ ಕುಮಾರ್ ರವರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಆದರೆ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸುವ ಮುನ್ನವೇ ಸ್ಥಳೀಯರಾದ  ಸುದೇಶ್ ರೈ ಕೋಡಂಬು, ಕಿಟ್ಟಣ್ಣ ಗೌಡ ಕೋಡಂಬು ಹಾಗೂ ಧರ್ಮಣ್ಣರವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here