ಪುತ್ತೂರು: ಸರ್ವೆ ಗ್ರಾಮದ ನೆಕ್ಕಿಲು ನಿವಾಸಿ ನಾಗಪ್ಪ ಎಂಬವರು ಪಾರ್ಶ್ವವಾಯು ಪೀಡಿತರಾಗಿದ್ದು ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷ ಹಾಗೂ ಸರ್ವೆ ಒಕ್ಕೂಟದ ಅಧ್ಯಕ್ಷರಾದ ಸುಂದರ ಬಲ್ಯಾಯ ಅವರ ಮನವಿಯಂತೆ ಯೋಜನೆಯ ನಿರ್ಗತಿಕರ ಮಾಶಾಸನದಡಿಯಲ್ಲಿ ವರ್ಷಕ್ಕೆ 12 ಸಾವಿರ ರೂ ಮೊತ್ತ ಮಂಜೂರುಗೊಂಡಿದ್ದು ಮಂಜೂರಾತಿ ಪತ್ರವನ್ನು ಸುಂದರ ಬಲ್ಯಾಯ ಅವರು ನಾಗಪ್ಪ ಅವರ ಪತ್ನಿಗೆ ನೀಡಿದರು.
