ಪುತ್ತೂರು: ಮೆಡಿಕಲ್ ಕಾಲೇಜಿನ ಹಿನ್ನೆಲೆ ಕುರಿತು ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಏನಂದ್ರು?

0

ಪುತ್ತೂರು: ಪುತ್ತೂರಿಗೆ ಮೆಡಿಕಲ್ ಕಾಲೇಜು ಬಜೆಟ್‌ನಲ್ಲಿ ಪ್ರಸ್ತಾವನೆ ಆಗಿದೆ. ಅದಕ್ಕೆ ಪ್ರಥಮವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಮೆಡಿಕಲ್ ಕಾಲೇಜು ಜಾಗ ಕಾದಿರುಸುವಲ್ಲಿ ಕಾರಣಿಕರ್ತರಾದ ಹಲವರಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರು ಹೇಳಿದರು.


ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಮೆಡಿಕಲ್ ಕಾಲೇಜಿನ ಜಾಗಕ್ಕಾಗಿ ಬನ್ನೂರು ಪಂಚಾಯತ್ ವಿ.ಎಗೆ ನಾನು ಅಭಿನಂದನೆ ಹೇಳಬೇಕು. ಅವರು ಜಾಗ ಹೇಳದಿದ್ದರೆ ಇವತ್ತಿಗೂ ಜಾಗ ಸಿಗುತ್ತಿರಲಿಲ್ಲ. ಇವತ್ತು ಮೆಡಿಕಲ್ ಕಾಲೇಜು ಪುತ್ತೂರಿಗೆ ಮಂಜೂರು ಮಾಡಿದ ಸಿಎಂ, ಡಿಸಿಎಂ, ಸಚಿವರ ಜೊತೆಗೆ ಮೆಡಿಕಲ್ ಕಾಲೇಜು ಜಾಗ ನೀಡಿದ ಸೇಡಿಯಾಪು ಮನೆಯವರಿಗೂ ಮತ್ತು ಅದನ್ನು ಉಳಿಸಲು ಹೋರಾಟ ಮಾಡಿದವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಪುತ್ತೂರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬಂದಾಗಲೂ ಶಾಸಕರು ಸಾರ್ವಜನಿಕರ ಮೂಲಕ ಮೆಡಿಕಲ್ ಕಾಲೇಜಿಗೆ ಬೇಡಿಕೆ ಇಟ್ಟರು. ಇದು ಕೂಡಾ ಮೆಡಿಕಲ್ ಕಾಲೇಜು ಮಂಜೂರಿಗೆ ಕಾರಣವಾಯಿತು. ಇವತ್ತು ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜಿನ ಪ್ರಸ್ತಾವನೆ ಆಗಿದೆ. ಬಜೆಟ್‌ನಲ್ಲಿ ಒಮ್ಮೆ ಬಂದ ಮೇಲೆ ಯಾವತ್ತಾದರೂ ಬಂದೆ ಬರುತ್ತದೆ. ಮೆಡಿಕಲ್ ಕಾಲೇಜು ಆಗುವಾಗ ಪುತ್ತೂರು ಬಹಳಷ್ಟು ಅಭಿವೃದ್ಧಿಯಾಗುತ್ತದೆ. ಮಂಗಳೂರಿನ ವೆನ್‌ಲಾಕ್‌ನಂತೆ ಪುತ್ತೂರಿನಲ್ಲೂ ಆಸ್ಪತ್ರೆಯಾಗಲಿ ಎಂದು ಶಕುಂತಳಾ ಶೆಟ್ಟಿ ಹೇಳಿದರು.


ಜಿಲ್ಲೆ ಬಿಟ್ಟು ಮೆಡಿಕಲ್ ಕಾಲೇಜಿನತ್ತ:
ಆರಂಭದಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗಿಂತಲೂ ಪುತ್ತೂರು ಜಿಲ್ಲೆ ಆಗಬೇಕೆಂಬ ಹೋರಾಟ ನಡೆಯುತ್ತಿತ್ತು. ಆಗ ನಾನು ಕೂಡಾ ಜಿಲ್ಲೆ ಆಗಬೇಕೆಂದೆ ಹೋರಾಟಕ್ಕೆ ಇಳಿದೆ. ಇದೇ ಸಂದರ್ಭ ಪ್ರಥಮ ಬಾರಿಗೆ ಸಿದ್ದರಾಮಯ್ಯ ಅವರು ಎಲ್ಲಾ ಜಿಲ್ಲೆಗಳಿಗೂ ಮೆಡಿಕಲ್ ಕಾಲೇಜು ಕೊಡುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿದರು. ಆಗ ನಾನು ಜಿಲ್ಲೆಯ ಬದಲು ಮೆಡಿಕಲ್ ಕಾಲೇಜು ಪುತ್ತೂರಿಗೂ ತರುವ ಕುರಿತು ಸಿ.ಎಂ ಅವರಲ್ಲಿ ಬೇಡಿಕೆಯಿಟ್ಟೆ. ಆಗ ನಿಮ್ಮ ಕ್ಷೇತ್ರದಲ್ಲಿ 8 ಮೆಡಿಕಲ್ ಕಾಲೇಜು ಇದೆ. ಅದರ ನಡುವೆ ಇನ್ನೊಂದು ಮೆಡಿಕಲ್ ಕಾಲೇಜು ಯಾಕೆ. ಈಗ ಮೊದಲು ಒಂದು ಮೆಡಿಕಲ್ ಕಾಲೇಜು ಇಲ್ಲದ ಜಿಲ್ಲೆಗೆ ಕೊಡುತ್ತೇನೆ. ನಿನ್ನ ಕ್ಷೇತ್ರಕ್ಕೂ ಕಂಡಿತಾ ಕೊಡುತ್ತೇನೆ. ನೀನು ಮೊದಲು ಜಾಗ ಹುಡುಕಿ ಇಡು ಎಂದು ಹೇಳಿದ್ದರು. ಮೆಡಿಕಲ್ ಕಾಲೇಜಿಗೆ 40 ಎಕ್ರೆ ಜಾಗ ಎಲ್ಲಿ ಹುಡುಕುವುದು ಎಂದು ಚಿಂತಿಸಿದಾಗ ಆಗಿನ ಸಮಯ ಒಬ್ಬನೆ ಒಬ್ಬ ಜಾಗ ಕೊಡಲು ಮುಂದೆ ಬರಲಿಲ್ಲ. ಈ ಸಂದರ್ಭ ವಿಶ್ವನಾಥ ನಾಯಕ್ ಮತ್ತು ಕೌಶಲಪ್ರಸಾದ್ ಅವರು ಕ್ರಿಕೆಟ್ ಕ್ರೀಡಾಂಗಣಕ್ಕೆ ಜಾಗ ಹುಡುಕುತ್ತಾ ಇದ್ರು. ನಾನು ಡಿಪ್ಲೋಮಾ ಕಾಲೇಜು ಮಾಡುವ ಕುರಿತು ಪ್ರಸ್ತಾಪಿಸಿದಾಗ ಮುರಳೀಧರ ರೈ ಮಠಂತಬೆಟ್ಟು ಅವರು ನಮ್ಮಲ್ಲಿ ಜಾಗ ಇದೆ ಹೇಳಿದಾಗ ಬನ್ನೂರು ವಿ.ಎ 50 ಎಕ್ರೆ ಜಾಗ ಇದೆ ಎಂದು ತಿಳಿಸಿದರು. ಆದರೆ ಅದು ಸೇಡಿಯಾಪಿನಲ್ಲಿ ಕುಮ್ಕಿ ಜಾಗ ಎಂದು ಹೇಳಿದ್ದರು. ಆಗ ನಾನು ಸೇಡಿಯಾಪು ಜನಾರ್ದನ ಭಟ್ ಅವರಿಗೆ ಕರೆ ಮಾಡಿದೆ. ಬಳಿಕ ಜನಾರ್ದನ ಭಟ್, ವಿಷ್ಣುಪ್ರಸನ್ನ ಅವರು ಮೂವರು ಸಹೋದರರು ಮೆಡಿಕಲ್ ಕಾಲೇಜಿಗಾಗಿ ಸಂತೋಷದಲ್ಲಿ ಜಾಗ ಬಿಡುತ್ತೇವೆ ಎಂದು ಹೇಳಿದ್ದರು. ಆಗ ನಾನು ನೇರ ಆಗಿನ ಜಿಲ್ಲಾಧಿಕಾರಿ ಇಬ್ರಾಹಿಂ ಅವರಲ್ಲಿ ಹೋಗಿ ಅಲ್ಲಿ ಕೂತೆ ಯಾವುದೇ ಅರ್ಜಿ ಹಾಕದೆ 2015 ರ ಆ.24ಕ್ಕೆ 40 ಎಕ್ರೆ ಜಾಗವನ್ನು ಸರಕಾರಿ ವೈದ್ಯಕೀಯ ಕಾಲೇಜು ಶೈಕ್ಷಣಿಕ ಉದ್ದೇಶಕ್ಕಾಗಿ ಕಾದಿರಿಸಿ, ಅರ್‌ಟಿಸಿ ಮಾಡಿಸಿದ್ದೆ. ಈಗ ಬಹುಶಃ ಎಲ್ಲಾ ಆಗಿ ಮೆಡಿಕಲ್ ಕಾಲೇಜು ಪುತ್ತೂರಿನಲ್ಲಿ ಆಗುವ ಕಾಲ ಬಂದಿದೆ ಎಂದು ಶಕುಂತಳಾ ಶೆಟ್ಟಿ ಹೇಳಿದರು.

LEAVE A REPLY

Please enter your comment!
Please enter your name here