ಪುತ್ತೂರು: ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿದುಶೇಖರ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುವ ಹಿಂದೂ ಧಾರ್ಮಿಕ ಶಿಕ್ಷಣದ ಆರ್ಯಾಪು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಶೇಷಪ್ಪ ಕುಲಾಲ್ ಎಂ ಹಾಗೂ ಕಾರ್ಯದರ್ಶಿಯಾಗಿ ಚೈತ್ರಿಕಾ ನಾಗೇಶ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಧನುಷ್ ಹೊಸಮನೆ, ತಾರಾನಾಥ್ ಮೆರ್ಲ, ಸಂಘಟನಾ ಕಾರ್ಯದರ್ಶಿಯಾಗಿ ಜಯಂತ ಶೆಟ್ಟಿ ಕಂಬಳದಡ್ಡ, ಸಂಚಾಲಕರಾಗಿ ಸೌಮ್ಯ ಮನಿತ್, ಖಜಾಂಜಿಯಾಗಿ ವಿನಯ ಚಂದ್ರನಾಥ ಮೆರ್ಲ, ಶಿಕ್ಷಕರುಗಳಾಗಿ ಹೇಮಲತಾ, ಸುಮಾ ಮತ್ತು ಸದಸ್ಯರುಗಳಾಗಿ ಅಂಕಿತ ಹೊಸಮನೆ, ಶುಭ, ನಾರಾಯಣ, ವಿಕಾಸ್ ಬಿ.ಎಂ., ಭವ್ಯ ಮೆರ್ಲ, ವಸಂತ ಅಡ್ಕ, ಚಂದ್ರಾವತಿ, ಸುನಿತಾ ಮೆರ್ಲ, ವಸಂತಿ, ಹರಿಣಿ ವಿ ರೈ, ಸತೀಶ್ ಬಾರಿಕೆ, ದೀಪಕ್ ಮೇರ್ಲ, ಪ್ರಮೀಳಾ ತಾರಾನಾಥ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಪುತ್ತೂರು ತಾಲೂಕಿನಲ್ಲಿ ಶಾಲಾ ಮಕ್ಕಳಿಗೆ ಮೂರು ಹಂತದಲ್ಲಿ ನೀಡಲು ಉದ್ದೇಶಿಸಿರುವ ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಲಾಗಿದ್ದು ಈಗಾಗಲೇ ಗ್ರಾಮ ಮಟ್ಟದಲ್ಲಿ ಸಮಿತಿಗಳು ರಚನೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬೂಡಿಯಾರು ಹೊಸಮನೆ ಶ್ರೀಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ.22ರಂದು ನಡೆದ ಸಭೆಯಲ್ಲಿ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಸಮಿತಿಯ ಸಂಯೋಜಕರಾದ ಸುಬ್ರಹ್ಮಣ್ಯ ನಟ್ಟೋಜ ರವರು ಮಾತನಾಡಿ, ಧರ್ಮ ಶಿಕ್ಷಣ ಯೋಜನೆಯ ಬಗ್ಗೆ ಶುಭ ಹಾರೈಸಿದರು. ಶೇಷಪ್ಪ ಕುಲಾಲ್ ಸ್ವಾಗತಿಸಿ, ಜಯಂತ ಶೆಟ್ಟಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು.