ರಾಮಕುಂಜ: ಹಿಮಾಯತುಲ್ ಇಸ್ಲಾಂ ಕಮಿಟಿ ಗಂಡಿಬಾಗಿಲು ಇದರ ವತಿಯಿಂದ ಮಜ್ಲಿಸುನ್ನೂರು, ಡಾ. ಶಾಹ್ ಮುಸ್ಲಿಯಾರ್ ಮಕ್ಬರ ಕೂಟ್ ಝಿಯಾರತ್ ಮತ್ತು ಇದರ ಸಲುವಾಗಿ ರಮಳಾನ್ ಉಪವಾಸ ಬಿಡಿಸುವ ಇಫ್ತಾರ್ ಕೂಟ ಮತ್ತು ಗಂಡಿಬಾಗಿಲು ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಮಸೀದಿ ಖತೀಬ್ ಸಹಿತ ಉಸ್ತಾದ್‌ರವರ ಬೀಳ್ಕೊಡುಗೆ ಸಮಾರಂಭ ಮಾ.25ರಂದು ಜರಗಿತು.
ಕುತುಬಿಯ್ಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಸೌಕತ್ ಆಲಿ ಫೈಝಿ ನೇತೃತ್ವದಲ್ಲಿ ಮಜ್ಲಿಸುನ್ನೂರ್ ನಡೆಯಿತು. ಬಳಿಕ ಸುಮಾರು 40 ವರ್ಷಗಳಿಗೂ ಅಧಿಕ ಕಾಲ ಮಸೀದಿಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಈಚೆಗೆ ನಿಧನ ಹೊಂದಿರುವ ವಾಗ್ಮಿ, ಚಿಂತಕ ಡಾ. ಶಾಹ್ ಮುಸ್ಲಿಯಾರ್ ಅವರ ಮಕ್ಬರ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಆ ಬಳಿಕ ಕಳೆದ ೪ ವರ್ಷಗಳಿಂದ ಸಂಸ್ಥೆಯ ಅಡಿಯಲ್ಲಿ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ಮಸೀದಿ ಖತೀಬ್ ಅಬ್ದುಲ್ ಹಮೀದ್ ಸೌಕತ್ ಆಲಿ ಫೈಝಿ, ಬದ್ರುದ್ದೀನ್ ಮುಸ್ಲಿಯಾರ್, ಇಬ್ರಾಹಿಂ ಮುಸ್ಲಿಯಾರ್‌ರವರಿಗೆ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.
ಸಮಾರಂಭದಲ್ಲಿ ಬಶೀರ್ ಷಾ ಆತೂರು, ಮಸೀದಿ ಅಧ್ಯಕ್ಷ ಎಸ್. ಅಬ್ದುಲ್ ರಹಿಮಾನ್, ಕಾರ‍್ಯದರ್ಶಿ ನಝೀರ್ ಪೂರಿಂಗ, ಕೋಶಾಧಿಕಾರಿ ಹಸೈನಾರ್ ಹಾಜಿ, ಉಪಾಧ್ಯಕ್ಷ ಜಿ. ಮಹಮ್ಮದ್ ರಫೀಕ್, ಪದಾಧಿಕಾರಿಗಳಾದ ಅಬ್ದುಲ್ ರಜಾಕ್ ಮರ‍್ವೇಲ್, ಜಿ.ಅಬ್ದುಲ್ ರಜಾಕ್, ಆದಂ ಹಾಜಿ ಎಸ್., ಝಕರಿಯಾ, ಬಿ.ಆದಂ ಹಾಜಿ, ಯಾಕೂಬ್ ಕುಂಟಲ್ತಡಿ, ನೂಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ಅಧ್ಯಕ್ಷ ಪಿ. ಲತೀಫ್, ಕಾರ‍್ಯದರ್ಶಿ ಝಿಯಾದ್, ಎಸ್.ಕೆ.ಎಸ್.ಎಸ್.ಎಫ್. ಪದಾಧಿಕಾರಿಗಳಾದ ಎಸ್.ಪಿ. ಖಲಂದರ್, ಇಸಾಕ್ ಬೊಲುಂಬುಡ, ರಾಹಿಲ್, ಮಹಮ್ಮದ್ ಆಲಿ ಮತ್ತಿತರರು ಉಪಸ್ಥಿತರಿದ್ದರು.
