ಪುತ್ತೂರು: ತಾ.ಪಂ ಕಚೇರಿಯ ಬಳಿ ಇರುವ ಹಲಸಿನ ಮರದ ಗೆಲ್ಲೊಂದು ಗೇಟ್ ಆವರಣ ಗೋಡೆ ಮತ್ತು ಪಕ್ಕದ ಕೋರ್ಟ್ ಕ್ಯಾಂಟೀನ್ ಮೇಲೆ ಬಿದ್ದ ಘಟನೆ ಮಾ.27 ರಂದು ನಡೆದಿದೆ.

ಮರದ ಗೆಲ್ಲು ಕೋರ್ಟ್ ಕ್ಯಾಂಟೀನ್ ಮೇಲ್ಚಾವಣಿ ಶೀಟ್ ಮೇಲೆ ಬಿದ್ದು ತಾ.ಪಂ ಗೇಟ್ ಆವರಣದ ಮೇಲೆ ಬಿದ್ದಿದೆ. ಮರದ ಗೆಲ್ಲು ಬೀಳುತ್ತಲೇ ಅಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ತೆರವುಗೊಳಿಸಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.