ಕುಕ್ಕೆ ಸುಬ್ರಹ್ಮಣ್ಯ ಸಹಿತ ರಾಜ್ಯದ 14 ದೇವಾಲಯಗಳಿಂದ ಪ್ರಸಾದ ಭಕ್ತರ ಮನೆ ಬಾಗಿಲಿಗೆ – ಇ-ಪ್ರಸಾದ ಸೇವೆಗೆ ಚಾಲನೆ

0

ಕಾಣಿಯೂರು: ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಪ್ರಸಾದವನ್ನು ಮನೆಬಾಗಿಲಿಗೆ ತಲುಪಿಸುವ ಇ-ಪ್ರಸಾದ ಸೇವೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಜ್ಯದ ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಹಿತ
ರಾಜ್ಯದ 14 ದೇವಾಲಯಗಳನ್ನು ಆಯ್ಕೆ ಮಾಡಿ ಪ್ರಾಯೋಗಿಕ ಪ್ರಸಾದ ಸೇವೆಗೆ ಚಾಲನೆ ನೀಡಲಾಗಿದೆ. ಮುಜರಾಯಿ ಇಲಾಖೆಯ ಪ್ರಮುಖ ದೇವಾ ಲಯಗಳ ಪ್ರಸಾದವನ್ನು ಭಕ್ತರ ಮನೆಬಾಗಿಲಿಗೆ ಸಿಎಸ್‌ಸಿ ಇ-ಗವರ್ನೆನ್ಸ್ ಸರ್ವೀಸ್ ಇಂಡಿಯಾ ಲಿಮಿಟೆಡ್ CSC e-Governance Services India Limited ಸಹಯೋಗದೊಂದಿಗ ಅನುಷ್ಠಾನಗೊಳಿಸಿ ಜಾರಿಗೆ ತರಲಾಗುತ್ತಿದೆ. ಈ ದೇವಾಲಯಗಳಲ್ಲಿ ಕಲ್ಲುಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ, ಕುಂಕುಮ, ಬಿಲ್ವಪತ್ರೆ, ಹೂವು, ತುಳಸಿ ಮತ್ತು ದೇವಾಲಯದ ಸ್ತೋತ್ರ ಗಳನ್ನು ತರಿಸಿಕೊಳ್ಳಬಹುದು.

ಪ್ರಸಾದ ತರಿಸಿಕೊಳ್ಳಬಹುದಾದ ದೇವಾಲಯಗಳು

LEAVE A REPLY

Please enter your comment!
Please enter your name here