ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಜಾತ್ರೆಯ ಕೊನೆಯ ದಿನವಾದ ಮಾ.27ರಂದು ಶ್ರೀದೇವಳದ ಮುಂಭಾಗದಲ್ಲಿ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟವು ವಿಜೃಂಭಣೆಯಿಂದ ನಡೆಯಿತು.

ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ, ಜ್ಯೋತಿಷಿ, ಯಕ್ಷಪ್ರೇಮಿಯೂ ಆಗಿರುವ ಮದ್ಲ ಸುಬ್ರಾಯ ಬಲ್ಯಾಯ ಮತ್ತು ಮನೆಯವರಿಂದ ಶ್ರೀದೇವಿಯ ಹರಕೆಯ ಸೇವೆಯಾಟವಾಗಿ ನಡೆದ ಯಕ್ಷಗಾನವು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಮತ್ತು ಕಾವು ನನ್ಯ ತುಡರ್ ಯುವಕ ಮಂಡಲದ ಸಹಕಾರದೊಂದಿಗೆ ನಡೆಯಿತು.
ಕಟೀಲು ಅಸ್ರಣ್ಣರ ಆಗಮನ:
ಯಕ್ಷಗಾನದ ಸಂದರ್ಭದಲ್ಲಿ ಬೆಳಗ್ಗಿನ ಪೂಜೆಯ ವೇಳೆ ಕಟೀಲು ದೇವಸ್ಥಾನದ ಅರ್ಚಕ ಕಮಲಾದೇವಿ ಅಸ್ರಣ್ಣರು ಆಗಮಿಸಿ ಸೇವಾಕರ್ತರಿಗೆ ಪ್ರಸಾದ ನೀಡಿ ಆಶೀರ್ವದಿಸಿದರು. ಸೇವಾಕರ್ತರಾದ ಪ್ರಭಾ ಸುಬ್ರಾಯ ಬಲ್ಯಾಯ ಮತ್ತು ರಮ್ಯರಾಂಪ್ರಸಾದ್ ದಂಪತಿಗಳು ಕಟೀಲು ಅಸ್ರಣ್ಣರಿಗೆ ಶಾಲು ಹಾಕಿ, ಫಲಪುಷ್ಫ ಕಾಣಿಕೆ ನೀಡಿ ಗೌರವಿಸಿದರು.
ಯಕ್ಷಗಾನದ ಸಂದರ್ಭದಲ್ಲಿ ಕಾವು ದೇವಸ್ಥಾನದ ಪವಿತ್ರಪಾಣಿ ನನ್ಯ ಅಚ್ಚುತ ಮೂಡೆತ್ತಾಯ, ಕಾವು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು ಮತ್ತು ಆಡಳಿತ ಸಮಿತಿ ಸದಸ್ಯರುಗಳು, ಮಾಜಿ ಆಡಳಿತ ಮೊಕ್ತೇಸರರಾದ ಕಾವು ಹೇಮನಾಥ ಶೆಟ್ಟಿ, ಚಂದ್ರಶೇಖರ ರಾವ್ ನಿಧಿಮುಂಡ, ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯ, ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಸಮಿತಿ ಗೌರವಾಧ್ಯಕ್ಷ ಗುಂಡ್ಯಡ್ಕ ವಾಸು ಪೂಜಾರಿ, ಅಧ್ಯಕ್ಷ ರಾಮದಾಸ ರೈ ಮದ್ಲ, ಸೇವಾಕರ್ತರ ಮನೆಯವರಾದ ಭಾಸ್ಕರ ಬಲ್ಯಾಯ, ಚಂದ್ರಶೇಖರ ಬಲ್ಯಾಯ, ಶ್ರೀಕುಮಾರ್ ಬಲ್ಯಾಯ, ನಿತಿನ್ ಬಲ್ಯಾಯ, ಸುಮಾ ಶರತ್ ಪಂಡಿತ್ ಮಂಗಳಪೇಟೆ, ರಮ್ಯರಾಂಪ್ರಸಾದ್ ಎಕ್ಕೂರು ಸೇರಿದಂತೆ ಭಗವದ್ಭಕ್ತರು, ಕಲಾಭಿಮಾನಿಗಳು ಪಾಲ್ಗೊಂಡಿದ್ದರು.