ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಪೂರಕವಾಗಿ 7 ದಿನಗಳ ಕಾಲ ನಡೆಯಲಿರುವ ಬೇಸಿಗೆ ಶಿಬಿರ “ಆಂತರ್ಯ”ವು ಮಾ.28ರಂದು ಉದ್ಘಾಟನೆಗೊಂಡಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಆಂತರ್ಯದ ಸಾಮರ್ಥ್ಯ ಅನಾವರಣಗೊಳಿಸಲು ಬೇಸಿಗೆ ಶಿಬಿರ ಉತ್ತಮ ವೇದಿಕೆಯಾಗಿದೆ. ಇಲ್ಲಿನ ಮಕ್ಕಳ ಶಿಸ್ತು ಅದ್ಭುತ ಕ್ರೀಯಾಶೀಲತೆ ಅನುಕರಣೀಯ,ಮಕ್ಕಳಲ್ಲಿ ಬಾಲ್ಯದಲ್ಲಿಯೇ ಸಂಸ್ಕಾರ ಮೂಡಿಸಿ ಭಾರತೀಯತೆಯನ್ನು ಬೆಳೆಸಬೇಕು ಎಂದರು.
ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ವಿನಯ್ ಸೂರಿಂಜೆ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಶಾಲಾ ಹಿರಿಯ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್, ಸಂಪನ್ಮೂಲ ವ್ಯಕ್ತಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಪ್ರವೀಣ್ ವರ್ಣಕುಟೀರ, ಬೆಥನಿ ಪ್ರೌಢಶಾಲೆಯ ಶಿಕ್ಷಕಿ ಸ್ಪೋಕನ್ ಇಂಗ್ಲಿಷ್ ತರಬೇತುದಾರರಾದ ಜೆನಿಫರ್ ಸೆರಾವೋ ಉಪಸ್ಥಿತರಿದ್ದರು.
ಬೇಸಿಗೆ ಶಿಬಿರದ ಸಂಯೋಜಕ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರರು. ಶಿಕ್ಷಕಿಯರಾದ ದಿವ್ಯ, ಹರೀನಾಕ್ಷಿ, ಜಯಲಕ್ಷ್ಮಿ, ನಳಿನಾಕ್ಷಿ, ಭವ್ಯ ಸಹಕರಿಸಿದರು.
7 ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಕರಕುಶಲ ವಸ್ತು ತಯಾರಿ, ರಸಪ್ರಶ್ನೆ, ಮೋಜಿನ ಆಟ, ಸ್ಪೋಕನ್ ಇಂಗ್ಲಿಷ್, ಚಿತ್ರಕಲೆ, ರಂಗ ತರಬೇತಿ, ಭಾಷಣ ಕಲೆ, ಸಭಾ ಕಂಪನ ತರಬೇತಿ ನಡೆಯಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.