ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದ ಬಳಿಕ ನಡೆಯುವ ನನ್ಯ ಶ್ರೀ ದಂಡನಾಯಕ (ಉಳ್ಳಾಕ್ಲು) ದೈವಗಳ ನೇಮೋತ್ಸವವು ಮಾ.30ರಂದು ನಡೆಯಿತು.

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ದೈವಗಳ ಸಾನಿಧ್ಯಕೇಂದ್ರವಾಗಿರುವ ಕಾರಣಿಕದ ನೆಲೆ ಎಂದೇ ಪ್ರಸಿದ್ಧಿಯಾಗಿರುವ ನನ್ಯ ಚಾವಡಿಯಿಂದ ಶ್ರೀದಂಡನಾಯಕ ದೈವಗಳ ಭಂಡಾರ ನನ್ಯ ಅಂಕತಮಜಲಿಗೆ ಬಂದು ಅಂಕತಮಜಲಿನಲ್ಲಿ ದೈವ ಸಿರಿಮುಡಿ ಇಟ್ಟು ಅಲ್ಲಿಂದ ಅಂಕಕಾದಿ, ಮಣ್ಣಪಾಪು ದಾಟಿ ಬಂದು ದರ್ಬೆತ್ತಡ್ಕ ಮಾಡದಲ್ಲಿ ಶ್ರೀ ದಂಡನಾಯಕ ದೈವಗಳ ನೇಮೋತ್ಸವ ನಡೆಯಿತು. ಬಳಿಕ ಭಕ್ತಾದಿಗಳ ಹರಿಕೆ ಕಾಣಿಕೆ ಸ್ವೀಕರಿಸಿ, ಅರಶಿನ ಹುಡಿ ಪ್ರಸಾದ ನೀಡಿ ಅಭಯ ಪ್ರದಾನ ನಡೆಯಿತು.
ಈ ಸಂದರ್ಭದಲ್ಲಿ ನನ್ಯ ಶ್ರೀ ದಂಡನಾಯಕ ದೈವಗಳ ಆಡಳಿತ ಮೊಕ್ತೇಸರ ನನ್ಯ ಅಚ್ಚುತ ಮೂಡೆತ್ತಾಯ, ನನ್ಯ ಮನೆತನದವರು, ಚಂದ್ರಶೇಖರ ರಾವ್ ನಿಧಿಮುಂಡ, ಕಾವು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು ಸೇರಿದಂತೆ ಊರ-ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.
ನನ್ಯ ತುಡರ್ ಯುವಕ ಮಂಡಲದಿಂದ ಮಜ್ಜಿಗೆ ವಿತರಣಾ ಸೇವೆ:
ನನ್ಯ ದರ್ಬೆತ್ತಡ್ಕ ಮಾಡದಲ್ಲಿ ನಡೆದ ಶ್ರೀ ದಂಡನಾಯಕ ದೈವಗಳ ನೇಮೋತ್ಸವದ ಸಂದರ್ಭದಲ್ಲಿ ವರ್ಷಂಪ್ರತಿಯಂತೆ ಕಾವು ನನ್ಯ ತುಡರ್ ಯುವಕ ಮಂಡಲದ ವತಿಯಿಂದ ನೆರಿದಿದ್ದ ಭಕ್ತಾದಿಗಳಿಗೆ ಉಚಿತ ಮಜ್ಜಿಗೆ ವಿತರಣಾ ಸೇವೆ ನಡೆಯಿತು.