ಕಡಬ: ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಿತು. ವಿಶೇಷವಾಗಿ ಭಜನಾ ಮಂಡಳಿಯ ಜೊತೆ ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಭಜನೆಯಲ್ಲಿ ಪಾಲ್ಗೊಂಡಿದ್ದರು.
ಭಜನೆಯಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಯ್ಕ್, ಕಾರ್ಯದರ್ಶಿ ಮನೋಹರ್ ರೈ, ಪದಾಧಿಕಾರಿಗಳಾದ ದಿನೇಶ್ ಶೆಟ್ಟಿ, ಯಶೋಧರ ಗೌಡ, ರಂಜಿತ್ ರೈ, ರಾಕೇಶ್ ಗೌಡ ಸೇರಿದಂತೆ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.