ಕರುವೇಲು ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

0

ಉಪ್ಪಿನಂಗಡಿ: ಕರುವೇಲು ಬದ್ರಿಯಾ ಜುಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ವಿಜೃಂಭಣೆಯಿಂದ ಈದುಲ್ ಫಿತ್ರ್ ಆಚರಿಸಿದರು.


ಈದ್ ನಮಾಝ್ ಮತ್ತು ಖುತ್ಬಾ ನೇತೃತ್ವವನ್ನು ವಹಿಸಿದ್ದ ಸ್ಥಳೀಯ ಖತೀಬ್ ಅಸ್ಸೈಯ್ಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ಅವರು ಈದ್ ಸಂದೇಶ ನೀಡಿ, ಪರಸ್ಪರ ಸ್ನೇಹ ಸಂಬಂಧ, ಸೌಹಾರ್ದತೆಯನ್ನು ಬೆಳೆಸಿ ಉತ್ತಮ ಸಮಾಜ ಸೇವೆಯ ಮೂಲಕ ಈದ್ ಆಚರಣೆ ನಡೆಸಬೇಕು. ಮಾದಕ ದ್ರವ್ಯ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದು, ಮಾದಕ ದ್ರವ್ಯ ಮುಕ್ತವಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.


ಈ ಸಂದರ್ಭ ಮುಅಝ್ಝಿನ್ ಉಸ್ತಾದ್ ಯೂಸುಫ್ ಮುಸ್ಲಿಯಾರ್ ಕೂಡುರಸ್ತೆ, ಜಮಾಅತ್ ಅಧ್ಯಕ್ಷರಾದ ಉಮರಬ್ಬ ತೋಜ, ಕಾರ್ಯದರ್ಶಿ ಅಬ್ದುಲ್ ರಝಾಕ್, ಕೋಶಾಧಿಕಾರಿ ಇಕ್ಬಾಲ್ ಪಚ್ಚಾಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here