ಕಾಣಿಯೂರು: ಕುದ್ಮಾರು ಶಾಲೆಯಲ್ಲಿ ಸಂಭ್ರಮ ಕಲಿಕೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ನಡೆಯಿತು. ಎರಡನೇ ದಿನದ ಸಂಪನ್ಮೂಲ ವ್ಯಕ್ತಿಗಳಾಗಿ ಕಾಣಿಯೂರು ಶಾಲಾ ಪ್ರಭಾರ ಮುಖ್ಯಗುರು ಬಾಲಕೃಷ್ಣರವರು ವಿದ್ಯಾರ್ಥಿಗಳಿಗೆ ಯೋಗ ,ಪ್ರಾಣಾಯಾಮ ಹಾಗೂ ಆರೋಗ್ಯಕರ ಜೀವನ ಶೈಲಿಯ ಸಂಬಂಧಿ ವಿವಿಧ ಮಾಹಿತಿಗಳನ್ನು ತಿಳಿಯಪಡಿಸಿದರು. ಸಂಪನ್ಮೂಲ ವ್ಯಕ್ತಿ ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ್ ವೈ ಇವರು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ವಿಷಯವಾಗಿ ವಿವಿಧ ಆಟಗಳು, ಹಾಡು, ಹಾಗೂ ಇತರ ಚಟುವಟಿಕೆಗಳ ಮೂಲಕ ತರಗತಿಯನ್ನು ತೆಗೆದುಕೊಂಡರು.
ಯೋಗ ಪ್ರಾಣ ವಿದ್ಯಾ ತಂತ್ರಗಳ ತರಗತಿಯನ್ನು ಶ್ರೀ ಹಿಮತ್ ಕೆ ಎಚ್ ಇವರು ನಿರ್ವಹಿಸಿ, ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸುವಂತಹ ಸೂಪರ್ ಬ್ರೈನ್ ಆಸನ,ಕ್ಷಮೆಯ ಸಾಧನ, ಲಯಬದ್ಧ ಉಸಿರಾಟ, ಧ್ಯಾನ ಹಾಗೂ ಇತರ ಪ್ರಾಣ ವಿದ್ಯಾ ತಂತ್ರಗಳ ಮೂಲಕ ಕಲಿಕೆಯಡೆಗೆ ವಿದ್ಯಾರ್ಥಿಗಳನ್ನು ತೆಗೆದುಕೊಂಡು ಹೋಗುವ ಅಭ್ಯಾಸಗಳ ಬಗೆಗೆ ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ವಿದ್ಯಾರ್ಥಿಗಳಿಂದ ಮಾಡಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ದೇವರಾಜ್ ನೂಜಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಹಿಮತ್ ಕೆಎಚ್ ಹಾಗೂ ಶಾಲಾ ಮುಖ್ಯ ಗುರುಗಳು ಕುಶಾಲಪ್ಪ ಬಿ ಇವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನೇತ್ರಾವತಿ 7ನೇ, ಸಿಂಚನ 7 ನೇ, ಪ್ರೀತಿ 7ನೇ, ವಂದನಾ 6ನೇ, ವೈಷ್ಣವಿ 6ನೇ, ತನ್ವಿ7ನೇ ಇವರು ಶಿಬಿರದ ಬಗೆಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕಿ ವೀಣಾ ಇವರು ಕಾರ್ಯಕ್ರಮದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಗುರು ಕುಶಾಲಪ್ಪ ರವರು ಸ್ವಾಗತಿಸಿ, ಅತಿಥಿ ಶಿಕ್ಷಕಿ ಸುಕನ್ಯಾ ಇವರು ವಂದಿಸಿದರು. ಶಿಕ್ಷಕಿ ಸುಜಾತಾ ಎ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕ ವೃಂದದವರು ಸಹಕರಿಸಿದರು.