ಕ್ರೈಸ್ತರ ಪವಿತ್ರವಾರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಮೌಲ್ಯಮಾಪನ – ಕ್ರೈಸ್ತ ಶಿಕ್ಷಕರಿಗೆ ರಜೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಥೋಲಿಕ್ ಸಭಾ ಮಂಗ್ಳೂರ್ ಪ್ರದೇಶ್ ಮನವಿ

0

ಪುತ್ತೂರು: ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯದವರಿಗೆ ಮಾ‌.5 ರಿಂದ ಎ.18ರ ಗುಡ್ ಫ್ರೈಡೆ, ಎ.20 ಈಸ್ಟರ್ ಹಬ್ಬವನ್ನು ಆಚರಿಸುವ ಸಂದರ್ಭ ಈ ಮಾಸವನ್ನು, ಪವಿತ್ರ ಮಾಸವಾಗಿದ್ದು, ಈ ಸಂದರ್ಭದಲ್ಲಿ ಕ್ರೈಸ್ತ ಶಿಕ್ಷಕರಿಗೆ ಮೌಲ್ಯಮಾಪನದಲ್ಲಿ ಭಾಗವಹಿಸಲು ಅಸಾಧ್ಯವಾಗಿರುವುದರಿಂದ ಅವರುಗಳಿಗೆ ರಜೆ ನೀಡುವಂತೆ ಕಥೋಲಿಕ್ ಸಭಾ ಮಂಗ್ಳೂರ್ ಪ್ರದೇಶ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ ನೀಡುವ ಮೂಲಕ ಒತ್ತಾಯ ಮಾಡಿದರು.

ಕ್ರೈಸ್ತ ಸಮುದಾಯವು ಈ ಪವಿತ್ರ ಮಾಸವನ್ನು ಎರಡು ಸಾವಿರ ವರ್ಷಗಳ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುತ್ತೇವೆ. ಈ ತಿಂಗಳಲ್ಲಿ 40 ದಿವಸ ಉಪವಾಸವನ್ನು ನಡೆಸಿ ಆಯಾ ಚರ್ಚ್ ಗಳಲ್ಲಿ ಪ್ರಾರ್ಥನೆಯನ್ನು ನಡೆಸುತ್ತಾ ಪಾಪ ಪರಿಹಾರಕ್ಕಾಗಿ ಪ್ರಾರ್ಥಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಶುಕ್ರವಾರ ಗುಡ್ ಫ್ರೈಡೇ ಈ ದಿನ ಯೇಸು ಕ್ರಿಸ್ತರನ್ನು ಶಿಲುಬೆಗೆ ಏರಿಸಿದ ದಿನ ಗುರುವಾರವು ಶುಭ ಗುರುವಾರ ಹಾಗೇ ಆದಿತ್ಯವಾರದಂದು ಯೇಸು ಕ್ರಿಸ್ತರು ಪುನರ್ ಜನ್ಮವಾದ ದಿನವನ್ನು ಆಚರಿಸಿಕೊಂಡು ಬಂದಿರುತ್ತಿದ್ದು, ಈ ವರ್ಷ ಎಸೆಸೆಲ್ಸಿ ಪರೀಕ್ಷೆ ಮುಗಿದು, ಅದರ ಮೌಲ್ಯ ಮಾಪನವನ್ನು ಎ.15 ರಿಂದ ಹತ್ತು ದಿನ ಹಮ್ಮಿಕೊಂಡಿರುವುದು ಕ್ರೈಸ್ತ ಸಮುದಾಯಕ್ಕೆ ಬೇಸರ ತಂದಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಕ್ರೈಸ್ತ ಶಿಕ್ಷಕರು ಇರುವುದರಿಂದಾಗಿ ಅವರಿಗೆ ಮೌಲ್ಯಮಾಪನಕ್ಕೆ ಹೋದರೆ ಈಸ್ಟರ್ ಹಬ್ಬ, ಗುಡ್ ಫ್ರೈಡೇ, ಶುಭ ಗುರುವಾರವನ್ನು ಆಚರಿಸಲು ಅಸಾಧ್ಯವಾಗಿರುವುದರಿಂದ ಈ ದಿನಾಂಕದಂದು ಅವರಿಗೆ ರಿಯಾಯತಿಯನ್ನು ಕೇಳಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರಾದ ಆಲ್ವಿನ್ ಡಿ’ಸೋಜಾರವರ ನೇತತ್ವದಲ್ಲಿ ನಿಯೋಗವು ತೆರಳಿ ಈ ದಿನದಂದು ಕ್ರೈಸ್ತ ಶಿಕ್ಷಕರಿಗೆ ರಜೆ ನೀಡಬೇಕೆಂದು ಕೇಳಿಕೊಂಡಾಗ ಅವರು ತಕ್ಷಣ ನಮ್ಮ ಮನವಿಗೆ ಸ್ಪಂದಿಸಿ ಬೋರ್ಡ್ ಡೈರೆಕ್ಟರ್ ರವರಿಗೆ ಬೆಂಗಳೂರಿಗೆ ಕರೆ ಮಾಡಿ ಗುರುವಾರ ಮತ್ತು ಶುಕ್ರವಾರದಂದು ರಜೆಯನ್ನು ನೀಡಬೇಕೆಂದು ಕೇಳಿಕೊಂಡಾಗ ಅವರು ಡಿಡಿಪಿಯಲ್ಲಿ ಹಾಗೂ ಅಧಿಕಾರಿ ವರ್ಗದವರಲ್ಲಿ ಸಮಾಲೋಚಿಸಿ ರಜೆಯನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.

ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷ ಆಲ್ವಿನ್ ಡಿ’ಸೋಜಾ, ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿ ಕೋಸ್ತಾ, ಫೆಜಾರ್ ವಲಯ ಅಧ್ಯಕ್ಷರಾದ ಸಂತೋಷ್ ಡಿ ಸೋಜಾ ಹಾಗೂ ಸಿಟಿ ವಲಯ ಅಧ್ಯಕ್ಷರಾದ ಅರುಣ್ ಡಿ ಸೋಜಾ, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಮೊಂತೆರೋ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here