ಅರಿಯಡ್ಕ: ಸಮಾಜ ಕಾರ್ಯ ವಿಭಾಗ ಡಾ.ಎಂ.ವಿ ಶೆಟ್ಟಿ ಇನ್ ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈನ್ಸಸ್ ಆಂಡ್ ಮ್ಯಾನೇಜ್ ಮೆಂಟ್ ವಿದ್ಯಾನಗರ ಮಂಗಳೂರು ಹಾಗೂ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ (ಎಸ್.ಸಿ.ಐ) ಪುತ್ತೂರು ಲೀಜನ್ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಶಿಬಿರ -2025 ರ ಉದ್ಘಾಟನಾ ಸಮಾರಂಭ ಎ.7ರಂದು ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪ್ರಗತಿ ಪರ ಕೃಷಿಕ ರಾಜೀವ ರೈ ಕುತ್ಯಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸರಕಾರಿ ಪ್ರೌಢಶಾಲೆ ಪಾಪೆಮಜಲು ಇದರ ಎಸ್ ಡಿಎಂಸಿ ಕಾರ್ಯಧ್ಯಕ್ಷ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳೂರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಗ್ರಾಮೀಣ ಶಿಬಿರಕ್ಕೆ ನಮ್ಮ ವಿದ್ಯಾ ಸಂಸ್ಥೆಯನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ನಿವೃತ್ತ ಸೈನಿಕ ಅಮ್ಮಣ್ಣ ರೈ ಡಿ.ಪಾಪೆಮಜಲು, ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇದರ ಮುಖ್ಯೋಪಾಧ್ಯಾಯ ಮೋನಪ್ಪ ಬಿ ಪೂಜಾರಿ, ಚೇಂಬರ್ ಇಂಟರ್ ನ್ಯಾಷನಲ್ ಪುತ್ತೂರು ಲೀಜನ್ ಇದರ ಅಧ್ಯಕ್ಷೆ ಮಲ್ಲಿಕಾ ಜೆ ರೈ ಪುತ್ತೂರು, ಚೇಂಬರ್ ಇಂಟರ್ ನ್ಯಾಷನಲ್ ಪುತ್ತೂರು ಲೀಜನ್ ಇದರ ಸದಸ್ಯೆ ಅನ್ನ ಪೂರ್ಣಿಮಾ ಆರ್ ರೈ ಕುತ್ಯಾಡಿ ಮುಂತಾದವರು ಉಪಸ್ಥಿತರಿದ್ದರು.
ಡಾ.ಎಂ.ವಿ ಶೆಟ್ಟಿ ಇನ್ ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈನ್ಸಸ್ ಆಫ್ ಮ್ಯಾನೇಜ್ಮೆಂಟ್ ಮಂಗಳೂರು ಇದರ ಸಹ ಪ್ರಾಧ್ಯಾಪಕಿ ಸ್ವಪ್ನ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಭವ್ಯ ಬಂಗೇರ ಸಹಕರಿಸಿದರು. ವಿದ್ಯಾರ್ಥಿ ಮಯಾರ್.ಕೆ ವಂದಿಸಿದರು. ವಿದ್ಯಾರ್ಥಿ ಡೆಸೀನಾ ಮೋಳ್ ಕಾರ್ಯಕ್ರಮ ನಿರೂಪಿಸಿದರು.